ಕುಮರಕೊಮಿನ ಜಾಮಾ ಮಸೀದಿಯು ತಳತಂಗಡಿ ಮಸೀದಿ ಎಂದೆ ಪ್ರಸಿದ್ಧಿಯಾಗಿದೆ. ಇದು ಕುಮರಕೊಮ್ ಪಟ್ಟಣದಿಂದ 12ಕಿ.ಮೀ ದೂರದಲ್ಲಿದ್ದು, ಈ ಪ್ರಾಂತ್ಯದ ಅತ್ಯಂತ ಪ್ರಸಿದ್ಧ ಧಾರ್ಮಿಕ ಯಾತ್ರಾ ಸ್ಥಳವಾಗಿದೆ. ಮೀನಚಿಲ್ ನದಿಯ ದಂಡೆಯಲ್ಲಿ ನೆಲೆಸಿರುವ ಈ ಮಸೀದಿಗೆ ವರ್ಷಪೂರ್ತಿ ಭಕ್ತಾಧಿಗಳು ಮತ್ತು ಪ್ರವಾಸಿಗರು ಭೇಟಿಕೊಡುತ್ತ ಇರುತ್ತಾರೆ.
ಈ ಮಸೀದಿಯ ಇತಿಹಾಸವು ಸಾವಿರಾರು ವರ್ಷಗಳಷ್ಟು ಹಿಂದಕ್ಕೆ ಕರೆದೊಯ್ಯುತ್ತದೆ. ಅಲ್ಲದೆ ಈ ಮಸೀದಿಯು ದೇಶದ ಅತ್ಯಂತ ಪುರಾತನ ಮಸೀದಿ ಎಂದು ಪರಿಗಣಿಸಲಾಗಿದೆ. ಜಾಮಾ ಮಸೀದಿಯು ತನ್ನ ಸಾಂಪ್ರದಾಯಿಕವಾದ ವಾಸ್ತುಶೈಲಿಯಿಂದಾಗಿ ಗಮನಸೆಳೆಯುತ್ತಿದೆ. ಗತಕಾಲದ ಭವ್ಯ ಸಂಸ್ಕೃತಿಯನ್ನು ಬಿಂಬಿಸುವಂತೆ ಮತ್ತು ಸಾಕ್ಷೀಕರಿಸುವಂತಿರುವ ಇಲ್ಲಿನ ಪದಗಳ ಕೆತ್ತನೆಯು ನೋಡುಗರ ಮನಸೂರೆಗೊಳ್ಳುತ್ತವೆ.
ಈ ಮಸೀದಿಯು ತನ್ನ ಒಳಗೆ ಒಂದು ಸಭಾಂಗಣವನ್ನು(ನಲುಕೆಟ್ಟು ಎಂದು ಸಹ ಕರೆಯಲಾಗುತ್ತದೆ) ಮತ್ತು ಸ್ನಾನದ ಪ್ರದೇಶವನ್ನು ಹೊಂದಿದೆ. ಈ ಮಸೀದಿಯನ್ನು ಕೇರಳಗೆ ಇಸ್ಲಾಂ ಧರ್ಮವನ್ನು ಪರಿಚಯಿಸಿದ ಮಲಿಕ್ ದಿನಾರ್ ರವರ ಮಗನಾದ ಹಬೀಬ್ ದಿನಾರ್ ನಿರ್ಮಿಸಿದನು. ಈ ಮಸೀದಿಯನ್ನು ಸರ್ಕಾರವು ಸಂರಕ್ಷಿತ ಸ್ಮಾರಕವೆಂದು ಘೋಷಿಸಿದೆ.