Search
  • Follow NativePlanet
Share
ಮುಖಪುಟ » ಸ್ಥಳಗಳು » ಕುಮರಕೊಮ್ » ಆಕರ್ಷಣೆಗಳು
  • 01ವೆಂಬನಾಡ್ ಸರೋವರ

    ವೆಂಬನಾಡ್ ಸರೋವರವು ಅಥವಾ ವೆಂಬನಾಡ್ ಕಾಯಲ್ ಎಂಬುದು ಒಂದು ಸುಂದರವಾದ ನಿಷ್ಕಲ್ಮಷವಾದ ಸರೋವರವಾಗಿದ್ದು, ಒಂದು ದ್ವೀಪ ಸಮೂಹವನ್ನು ಒಳಗೊಂಡಿದೆ. ಅದರಲ್ಲಿ ಕುಮರಕೊಮ್ ಸಹ ಒಂದು. ಇದರ ಸುಂದರ ಜಲಸಾಗರವನ್ನು ಮತ್ತು ದ್ವೀಪಕಲ್ಪಗಳನ್ನು ನೋಡುವ ಸಲುವಾಗಿ ಪ್ರವಾಸಿಗರು ಇಲ್ಲಿಗೆ ಆಗಮಿಸುತ್ತಿರುತ್ತಾರೆ. ಈ ಸರೋವರವು ಕೇರಳದ ದೊಡ್ಡ...

    + ಹೆಚ್ಚಿಗೆ ಓದಿ
  • 02ಅರುವಿಕ್ಕುಳಿ ಜಲಪಾತ

    ಅರುವಿಕ್ಕುಳಿ ಜಲಪಾತ

    ಅರುವಿಕ್ಕುಳಿ ಜಲಪಾತವು ತನ್ನ ಸಹಜ ಸೌಂದರ್ಯದಿಂದ ನೋಡುಗರನ್ನು ಸೆಳೆಯುವ ಒಂದು ಸುಂದರ ಜಲಪಾತವಾಗಿದೆ. ಇದು ಕುಮರಕೊಮಿಗೆ ಸಮೀಪದಲ್ಲಿ ನೆಲೆಗೊಂಡಿದೆ. ಈ ಜಲಪಾತಕ್ಕೆ ಇಲ್ಲಿಂದ 18 ಕಿ.ಮೀ ದೂರದಲ್ಲಿರುವ ಕೊಟ್ಟಾಯಂನಿಂದ ಸುಲಭವಾಗಿ ತಲುಪಬಹುದು. ಈ ಪ್ರಸಿದ್ಧ ಪ್ರವಾಸಿ ತಾಣಕ್ಕೆ ಕುಮರಕೊಮಿನ ಮೂಲಕ ಪ್ರವಾಸಿಗರು...

    + ಹೆಚ್ಚಿಗೆ ಓದಿ
  • 03ಕುಮರಕೊಮ್ ಪಕ್ಷಿಧಾಮ

    ಕುಮರಕೊಮ್ ಪಕ್ಷಿ ಧಾಮ ಅಥವಾ ವೆಂಬನಾಡ್ ಪಕ್ಷಿಧಾಮವು ವೆಂಬನಾಡ್ ಸರೋವರದ ಪೂರ್ವಭಾಗದಲ್ಲಿ ನೆಲೆಗೊಂಡಿದೆ. ಹಿನ್ನೀರಿನ ಹಿನ್ನಲೆಯನ್ನು ಹೊಂದಿರುವ  ಈ ಪಕ್ಷಿಧಾಮವು ಮಂತ್ರ ಮುಗ್ಧಗೊಳಿಸುವಂತಹ ತಾಣವಾಗಿದೆ. ಈ ಪಕ್ಷಿಧಾಮವು ನೂರಾರು ವಲಸೆ ಹಕ್ಕಿಗಳಿಗೆ ತಾತ್ಕಾಲಿಕವಾಗಿ ಆಶ್ರಯವನ್ನು ಕಲ್ಪಿಸುತ್ತದೆ. ಇದು ಪಕ್ಷಿತಙ್ಞರು...

    + ಹೆಚ್ಚಿಗೆ ಓದಿ
  • 04ಪತಿರಮನ್ನಲ್

    ಪತಿರಮನ್ನಲ್

    ಪತಿರಮನ್ನಲ್ ಎಂಬುದು ಕುಮರಕೊಮ್ ಸಮೀಪದ ಒಂದು ಸುಂದರವಾದ ದ್ವೀಪವಾಗಿದೆ. ಇದು ಆನಂದ ಪದ್ಮನಾಭನ್ ತೊಪ್ಪು ಮತ್ತು ಪಾತಿರ ತೊಪ್ಪು ಎಂಬ ಹೆಸರುಗಳಿಂದಲು ಚಿರಪರಿಚಿತವಾಗಿದೆ. ವೆಂಬನಾಡ್ ಸರೋವರದ ನಡುವೆ ನೆಲೆಗೊಂಡಿರುವ ಈ ನಯನ ಮನೋಹರವಾದ ದ್ವೀಪವು ಸುಮಾರು 10 ಎಕರೆಗಳಷ್ಟು ವಿಸ್ತೀರ್ಣವನ್ನು ಹೊಂದಿದೆ. ಕೊಟ್ಟಾಯಂ ಮತ್ತು ಅಲೆಪ್ಪಿ...

    + ಹೆಚ್ಚಿಗೆ ಓದಿ
  • 05ಬೇ ಐಲ್ಯಾಂಡ್ ಡ್ರಿಫ್ಟ್ ವುಡ್ ವಸ್ತುಸಂಗ್ರಹಾಲಯ

    ಬೇ ಐಲ್ಯಾಂಡ್ ಡ್ರಿಫ್ಟ್ ವುಡ್ ವಸ್ತುಸಂಗ್ರಹಾಲಯ

    ಬೇ ಐಲ್ಯಾಂಡ್ ಡ್ರಿಫ್ಟ್ ವುಡ್ ವಸ್ತುಸಂಗ್ರಹಾಲಯವು ಭಾರತದಲ್ಲಿ ತನ್ನ ಪ್ರಕಾರದ ಏಕೈಕ ವಸ್ತುಸಂಗ್ರಹಾಲಯವೆಂಬ ಹೆಗ್ಗಳಿಕೆಯನ್ನು ಹೊಂದಿದೆ. ಇದರ ವಿಶೇಷವೇನೆಂದರೆ ಇಲ್ಲಿ ನೀರಿನಲ್ಲಿ ಕೊಚ್ಚಿಕೊಂಡು ಬಂದ ಮರಗಳನ್ನು ಸಂಗ್ರಹಿಸಿ, ಅವುಗಳಿಗೆ ಕಲಾತ್ಮಕ ಸ್ಪರ್ಷವನ್ನು ನೀಡಲಾಗಿದೆ. ಇದು ಪ್ರಕೃತಿ ಮತ್ತು ಮಾನವನ ಸೃಜನಶೀಲತೆ...

    + ಹೆಚ್ಚಿಗೆ ಓದಿ
  • 06ಕುಮರಕೊಮ್ ಹಿನ್ನೀರು

    ಕುಮರಕೊಮ್ ಹಿನ್ನೀರು ಎಂಬುದು ಪ್ರಸಿದ್ಧ ಪ್ರವಾಸಿ ತಾಣವಾಗಿದ್ದು, ವಿಶ್ವದೆಲ್ಲೆಡೆಯಿಂದ ಪ್ರವಾಸಿಗರನ್ನು ತನ್ನತ್ತ ಆಕರ್ಷಿಸುತ್ತಿದೆ. ಪ್ರಶಾಂತವಾದ ಸರೋವರಗಳು ಮತ್ತು ಹಚ್ಚ ಹಸಿರಿನಿಂದ ಕೂಡಿದ ವೃಕ್ಷ ಸಮೂಹಗಳೆಲ್ಲವು ಸೇರಿ ಇಲ್ಲಿನ ಹಿನ್ನೀರಿನ ಸೌಂದರ್ಯವನ್ನು ಇಮ್ಮಡಿಗೊಳಿಸಿದ್ದಲ್ಲದೆ, ಈ ಪ್ರದೇಶವನ್ನು ಅತ್ಯಂತ ಆಕರ್ಷಕ...

    + ಹೆಚ್ಚಿಗೆ ಓದಿ
  • 07ಕುಮರಕೊಮ್ ಬೀಚ್

    ಕುಮರಕೊಮ್ ಬೀಚ್

    ಕುಮರಕೊಮ್ ಬೀಚ್ ಕೇರಳದ ಅತ್ಯಂತ ಮನಮೋಹಕ ಬೀಚುಗಳಲ್ಲಿ ಒಂದಾಗಿದ್ದು, ತನ್ನ ಅಬ್ಬರವಿಲ್ಲದ ವಾತಾವರಣದಿಂದಾಗಿ ವಿರಾಮಕಾಲವನ್ನು ಕಳೆಯಲು ಹೇಳಿ ಮಾಡಿಸಿದ ತಾಣವಾಗಿದೆ. ಈ ಬೀಚಿನಲ್ಲಿ ವಿಶಾಲವಾಗಿ ಹರಡಿಕೊಂಡಿರುವ ಮರಳ ದಂಡೆಗಳು ಪ್ರವಾಸಿಗರಿಗೆ ವಿರಾಮ ಕಾಲವನ್ನು ಕಳೆಯುತ್ತ, ಆನಂದಿಸಲು ಅನುಕೂಲವನ್ನು ಮಾಡಿಕೊಡುತ್ತದೆ. ವಾಣಿಜ್ಯ...

    + ಹೆಚ್ಚಿಗೆ ಓದಿ
  • 08ತಿರುನಕ್ಕರ ಮಹಾದೇವ ದೇವಾಲಯ

    ತಿರುನಕ್ಕರ ಮಹಾದೇವ ದೇವಾಲಯ

    ತಿರುನಕ್ಕರ ಮಹಾದೇವ ದೇವಾಲಯವು ಕೊಟ್ಟಾಯಂನಿಂದ 2ಕಿ.ಮೀ ದೂರದಲ್ಲಿದ್ದು, ಕುಮರಕೊಮಿನ ಪ್ರಮುಖ ಧಾರ್ಮಿಕ ಕೇಂದ್ರವಾಗಿದೆ.  ಈ ದೇವಾಲಯದ ಇತಿಹಾಸವು ನಮ್ಮನ್ನು 16ನೇ ಶತಮಾನಗಳಷ್ಟು ಹಿಂದಕ್ಕೆ ಕೊಂಡೊಯ್ಯುತ್ತದೆ. ನಂಬಿಕೆಗಳ ಪ್ರಕಾರ ಈ ದೇವಾಲಯವನ್ನು ತೆಕ್ಕುಂಕೂರಿನ ರಾಜ ನಿರ್ಮಿಸಿದನು ಎಂದು ಭಾವಿಸಲಾಗುತ್ತದೆ. ಈ...

    + ಹೆಚ್ಚಿಗೆ ಓದಿ
  • 09ವೈಕೊಮ್ ಮಹಾದೇವ ದೇವಾಲಯ

    ವೈಕೊಮ್ ಮಹಾದೇವ ದೇವಾಲಯ

    ವೈಕೊಮ್ ಮಹಾದೇವ ದೇವಲಯವು ಕೇರಳದ ಅತ್ಯಂತ ಹಳೆಯ ಮತ್ತು ಐತಿಹಾಸಿಕ ದೇವಾಲಯವೆನ್ನುವ ಕಾರಣಕ್ಕೆ ದೇಶದ ಉದ್ದಗಲಕ್ಕು ತನ್ನ ಗಮನವನ್ನು ಸೆಳೆದಿದೆ.ಈ ದೇವಾಲಯವು ವೆಂಬನಾಡ್ ಕೆರೆಯ ಪಕ್ಕದಲ್ಲಿ ನೆಲೆಸಿರುವ ವೈಕೊಮ್ ಎಂಬ ಪಟ್ಟಣದಲ್ಲಿ ನೆಲೆಗೊಂಡಿದೆ. ಈ ದೇವಾಲಯವು ಶೈವರು ಮತ್ತು ವೈಷ್ಣವರಿಬ್ಬರು ಪೂಜಿಸುವ ಕೆಲವೆ ಕೆಲವು ಶಿವನ...

    + ಹೆಚ್ಚಿಗೆ ಓದಿ
  • 10ಜಾಮಾ ಮಸೀದಿ

    ಜಾಮಾ ಮಸೀದಿ

    ಕುಮರಕೊಮಿನ ಜಾಮಾ ಮಸೀದಿಯು ತಳತಂಗಡಿ ಮಸೀದಿ ಎಂದೆ ಪ್ರಸಿದ್ಧಿಯಾಗಿದೆ. ಇದು ಕುಮರಕೊಮ್ ಪಟ್ಟಣದಿಂದ 12ಕಿ.ಮೀ ದೂರದಲ್ಲಿದ್ದು, ಈ ಪ್ರಾಂತ್ಯದ ಅತ್ಯಂತ ಪ್ರಸಿದ್ಧ ಧಾರ್ಮಿಕ ಯಾತ್ರಾ ಸ್ಥಳವಾಗಿದೆ. ಮೀನಚಿಲ್ ನದಿಯ ದಂಡೆಯಲ್ಲಿ ನೆಲೆಸಿರುವ ಈ ಮಸೀದಿಗೆ ವರ್ಷಪೂರ್ತಿ ಭಕ್ತಾಧಿಗಳು ಮತ್ತು ಪ್ರವಾಸಿಗರು ಭೇಟಿಕೊಡುತ್ತ...

    + ಹೆಚ್ಚಿಗೆ ಓದಿ
  • 11ಎಟ್ಟುಮನೂರ್ ಮಹಾದೇವ ದೇವಾಲಯ

    ಎಟ್ಟುಮನೂರ್ ಮಹಾದೇವ ದೇವಾಲಯ

    ಎಟ್ಟುಮನೂರ್ ಮಹಾದೇವ ದೇವಾಲಯವು ಕೊಟ್ಟಾಯಂ ನಗರದಿಂದ 10 ಕಿ.ಮೀ ದೂರದಲ್ಲಿದ್ದು, ಕುಮರಕೊಮಿನ ಪ್ರಸಿದ್ಧ ಧಾರ್ಮಿಕ ಸ್ಥಳವಾಗಿದೆ. ಇದು ಕೇರಳದಲ್ಲಿರುವ ಅತ್ಯಂತ ಹಳೆಯ ಶಿವನ ದೇವಾಲಯವಾಗಿದೆ. ಇದರ ಇತಿಹಾಸವು ಸುಮಾರು ಶತಮಾನಗಳಷ್ಟು ಹಿಂದಕ್ಕೆ ಕೊಂಡೊಯುತ್ತದೆ. ಸಹಸ್ರಾರು ಭಕ್ತರು ಪ್ರತಿವರ್ಷ ಇಲ್ಲಿನ ಸ್ವಾಮಿಯ ಆಶೀರ್ವಾದವನ್ನು...

    + ಹೆಚ್ಚಿಗೆ ಓದಿ
  • 12ಸೆಂಟ್.ಮೇರೀಸ್ ಚರ್ಚ್, ಚೆರಿಯಪಲ್ಲಿ

    ಸೆಂಟ್.ಮೇರೀಸ್ ಚರ್ಚ್, ಚೆರಿಯಪಲ್ಲಿ

    ಸೆಂಟ್.ಮೇರೀಸ್ ಚರ್ಚ್ ಕುಮರಕೊಮ್ ಬಳಿಯಲ್ಲಿರುವ ಅತ್ಯಂತ ಪ್ರಸಿದ್ಧ ಕ್ರೈಸ್ತರ ಆರಾಧನಾ ಸ್ಥಳವಾಗಿದೆ. ಇದು ಕೊಟ್ಟಾಯಂನಿಂದ 12 ಕಿ.ಮೀ ದೂರದಲ್ಲಿದೆ. ಈ ಚರ್ಚ್ 1579ರಲ್ಲಿ ನಿರ್ಮಿಸಲ್ಪಟ್ಟಿತು. ತನ್ನೊಳಗೆ ಹಲವು ಶತಮಾನಗಳಷ್ಟು ಇತಿಹಾಸವನ್ನು ಅಡಗಿಸಿಕೊಂಡಿರುವ ಇದು ಮಲಂಕರ ಸಂಪ್ರದಾಯದ ಕ್ರೈಸ್ತರಿಗೆ ಅತ್ಯಂತ ಪವಿತ್ರ...

    + ಹೆಚ್ಚಿಗೆ ಓದಿ
  • 13ಸೆಂಟ್ ಮೇರೀಸ್ ಚರ್ಚ್, ಅತಿರಾಂಪುಳ

    ಸೆಂಟ್ ಮೇರೀಸ್ ಚರ್ಚ್, ಅತಿರಾಂಪುಳ

    ಅತಿರಾಂಪುಳದ ಸೆಂಟ್ ಮೇರೀಸ್ ಚರ್ಚ್ ಕೇರಳದ ಅತ್ಯಂತ ಪ್ರಾಚೀನ ಮತ್ತು ಪ್ರಸಿದ್ಧ ಚರ್ಚುಗಳಲ್ಲಿ ಒಂದಾಗಿದೆ. ಇದೊಂದು ಅತಿ ಹೆಚ್ಚು ಸಂಖ್ಯೆಯಲ್ಲಿ ಪ್ರವಾಸಿಗರನ್ನು ಮತ್ತು ಭಕ್ತಾಧಿಗಳನ್ನು ಆಕರ್ಷಿಸುತ್ತಿರುವ ಧಾರ್ಮಿಕ ಯಾತ್ರಾಸ್ಥಳವಾಗಿದೆ. ಈ ಚರ್ಚಿನ ನಿರ್ಮಾಣದ ಕಾಲವು ನಮ್ಮನ್ನು  ಕ್ರಿ.ಶ 835ರಷ್ಟು ಹಿಂದಕ್ಕೆ...

    + ಹೆಚ್ಚಿಗೆ ಓದಿ
One Way
Return
From (Departure City)
To (Destination City)
Depart On
23 Apr,Tue
Return On
24 Apr,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
23 Apr,Tue
Check Out
24 Apr,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
23 Apr,Tue
Return On
24 Apr,Wed