Search
  • Follow NativePlanet
Share
ಮುಖಪುಟ » ಸ್ಥಳಗಳು » ಕುಲ್ಲು » ಆಕರ್ಷಣೆಗಳು » ಜಗನ್ನಾಥಿ ದೇವಿ ದೇವಾಲಯ

ಜಗನ್ನಾಥಿ ದೇವಿ ದೇವಾಲಯ, ಕುಲ್ಲು

1

ಜಗನ್ನಾಥಿ ದೇವಿ ದೇವಾಲಯವನ್ನು ತ್ರಿಮೂರ್ತಿಗಳಲ್ಲಿ ಸ್ಥಿತಿಕಾರಕನಾದ ವಿಷ್ಣುವಿನ ಸಹೋದರಿಯಾದ ಭುವನೇಶ್ವರಿ ದೇವಿಗೆ ಸಮರ್ಪಿಸಲಾಗಿದೆ. ಇದು ಕುಲ್ಲುವಿನಲ್ಲಿರುವ ಬೇಖ್ಲಿಯ ಪ್ರಸಿದ್ಧ ಯಾತ್ರಾ ಸ್ಥಳವಾಗಿದೆ. ಜಗನ್ನಾಥಿ ದೇವಿ ದೇವಾಲಯವನ್ನು ಸುಮಾರು 1500 ವರ್ಷಗಳ ಹಿಂದೆ ನಿರ್ಮಾಣ ಮಾಡಲಾಗಿದೆಯೆಂಬುದು ಸ್ಥಳೀಯರ ನಂಬಿಕೆಯಾಗಿದೆ. ಈ ದೇವಾಲಯವು ಸಮುದ್ರ ಮಟ್ಟದಿಂದ 1800 ಮೀಟರ್ ಎತ್ತರದಲ್ಲಿ ನೆಲೆಗೊಂಡಿದೆ. ಹಾಗು ಇದನ್ನು ತಲುಪಲು ನೀವು 90 ನಿಮಿಷಗಳ ಕಾಲ್ನಡಿಗೆಯ ದೂರವನ್ನು ಕ್ರಮಿಸಬೇಕು.

ಜಗನ್ನಾಥಿ ದೇವಿ ದೇವಾಲಯದ ಗೋಡೆಗಳನ್ನು ಹಿಂದೂ ಧರ್ಮದ ಆದಿಶಕ್ತಿ ಸ್ವರೂಪಿಯಾದ ದುರ್ಗಾದೇವಿಯ ಚಿತ್ರಗಳಿಂದ ಅಲಂಕರಿಸಲಾಗಿದೆ. ಈ ದೇವಾಲಯದಲ್ಲಿರುವ ವಿಗ್ರಹವು ಗಡ್ಡಿ ಮತ್ತು ರಾಜಸ್ಥಾನಿ ಬುಡಕಟ್ಟು ಶೈಲಿಯನ್ನು ಪ್ರತಿನಿಧಿಸುತ್ತದೆ. ಪ್ರಸಿದ್ಧ ಜನಪದ ಕಥೆಯ ಪ್ರಕಾರ, ಒಬ್ಬ ಕುರಿ ಕಾಯುವ ಬಾಲಕನು ಇಲ್ಲಿ ತನ್ನ ಕೊಳಲಿನಲ್ಲಿ ಸುಮಧುರವಾದ ರಾಗವನ್ನು ನುಡಿಸುತ್ತಾ ಇರುವಾಗ ಇಬ್ಬರು ಬಾಲಕಿಯರು ನರ್ತಿಸುತ್ತಿದ್ದರಂತೆ. ಒಮ್ಮೆ ಆ ಬಾಲಕನು ಒಬ್ಬ ಹುಡುಗಿಯನ್ನು ಹಿಡಿದು ಕೊಂಡಾಗ, ಆಕೆಯು ಅವನಿಗೆ ತನ್ನ ನಿಜವಾದ ದೈವ ಸ್ವರೂಪವನ್ನು ತೋರಿದಳಂತೆ. ಆಗಿನಿಂದ ಈ ದೇವಿಯು ಬೇಖ್ಲಿ ಗ್ರಾಮದಲ್ಲಿ ನೆಲೆಸಲು ತೀರ್ಮಾನಿಸಿದಳಂತೆ.

One Way
Return
From (Departure City)
To (Destination City)
Depart On
28 Mar,Thu
Return On
29 Mar,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
28 Mar,Thu
Check Out
29 Mar,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
28 Mar,Thu
Return On
29 Mar,Fri