ಚಂದ್ರಖಾನಿ ಪಾಸ್ ಸಮುದ್ರ ಮಟ್ಟದಿಂದ 3600 ಮೀಟರ್ ಎತ್ತರದಲ್ಲಿ ನೆಲೆಗೊಂಡಿದೆ. ಇದು ಪಾರ್ವತಿ ಕಣಿವೆಯಲ್ಲಿ ಕಂಡು ಬರುತ್ತದೆ. ಅಲ್ಲದೆ ಇದು ಮಲಾನ ಮತ್ತು ಕುಲ್ಲುಗಳ ಜೊತೆಗೆ ಸಂಪರ್ಕವನ್ನು ಹೊಂದಿದೆ. ತನ್ನ ಪ್ರಾಕೃತಿಕ ಸೌಂದರ್ಯಕ್ಕೆ ಹೆಸರುವಾಸಿಯಾಗಿರುವ ಈ ಪಾಸ್ ಚಾರಣಿಗರಿಗೆ ಒಂದು ಅತ್ಯುತ್ತಮ ಮೂಲಸ್ಥಾನವಾಗಿ ಸೇವೆ ಸಲ್ಲಿಸುತ್ತಿದೆ. ಮಲಾನ ಎಂಬ ಸಣ್ಣ ಗುಡ್ಡಗಾಡಿನ ಹಳ್ಳಿಯಲ್ಲಿ ಚಾರಣಿಗರು ವಿಶ್ರಾಂತಿ ಪಡೆಯಬಹುದು. ಇದು ಈ ಪಾಸ್ನ ಕೆಳಗಡೆ ನೆಲೆಗೊಂಡಿದೆ. ಮೇ ನಿಂದ ಅಕ್ಟೋಬರ್ ನಡುವಿನ ಅವಧಿಯು ಇಲ್ಲಿಗೆ ಭೇಟಿಕೊಡಲು ಮತ್ತು ಚಾರಣದಲ್ಲಿ ಪಾಲ್ಗೊಳ್ಳಲು ಹೇಳಿ ಮಾಡಿಸಿದ ಸಮಯವಾಗಿದೆ.