ಬಾಷೇಶ್ವರ್ ಮಹಾದೇವ್ ದೇವಾಲಯವು ಕುಲ್ಲು ಜಿಲ್ಲೆಯಲ್ಲಿರುವ ಬಜುರ ಎಂಬ ಗ್ರಾಮದಲ್ಲಿ ನೆಲೆಸಿದೆ. ಇದು ಈ ನಗರದಿಂದ 15 ಕಿ.ಮೀ ದೂರದಲ್ಲಿದ್ದು ರಾಷ್ಟ್ರೀಯ ಹೆದ್ದಾರಿ 21ರಲ್ಲಿ ಬರುತ್ತದೆ. ಈ ದೇವಾಲಯವು ಬಿಯಾಸ್ ನದಿಯ ದಂಡೆಯ ಮೇಲೆ ನೆಲೆಗೊಂಡಿದ್ದು, ತನ್ನಲ್ಲಿರುವ ಕಲ್ಲಿನ ಕೆತ್ತನೆಗಳಿಗೆ ಮತ್ತು ಶಿಖರ ಅಥವಾ ಗೋಪುರಗಳಿಗೆ ಹೆಸರುವಾಸಿಯಾಗಿದೆ.
ಈ ದೇವಾಲಯದಲ್ಲಿ "ಯೋನಿ ಲಿಂಗ" ವೆಂಬ ಒಂದು ದೊಡ್ಡ ಲಿಂಗವಿದೆ. ಇದು ಲಯಕಾರಕನಾದ ಶಿವನನ್ನು ಹಾಗು ಪಾರ್ವತಿಯನ್ನು ಪ್ರತಿನಿಧಿಸುತ್ತದೆ. ಇಲ್ಲಿ ಕಲ್ಲಿನ ಸೂಕ್ಷ್ಮ ಕೆತ್ತನೆಗಳನ್ನು ನಾವು ನೋಡಬಹುದು. ಅವುಗಳಲ್ಲಿ ಸಾಲಾಗಿ ಕೆತ್ತಲಾಗಿರುವ ಹೂವಿನ ಚಿತ್ತಾರಗಳು ನೋಡುಗರ ಮನ ಸೆಳೆಯುತ್ತದೆ. ಸ್ಥಿತಿಕಾರಕನಾದ ವಿಷ್ಣುವಿನ ಚಿಕ್ಕ ದೇವಾಲಯ, ಐಶ್ವರ್ಯದ ದೇವಿಯಾದ ಲಕ್ಷ್ಮೀ, ಶಕ್ತಿ ದೇವತೆಯಾದ ದುರ್ಗಾ ಮತ್ತು ಗಣಪತಿಗಳ ಚಿಕ್ಕ ದೇವಾಲಯಗಳನ್ನು ಸಹ ಈ ದೇವಾಲಯದ ಆವರಣದಲ್ಲಿ ನಾವು ಕಾಣಬಹುದು.