Search
  • Follow NativePlanet
Share
ಮುಖಪುಟ » ಸ್ಥಳಗಳು » ಕೃಷ್ಣಗಿರಿ » ಆಕರ್ಷಣೆಗಳು » ಸರ್ಕಾರಿ ವಸ್ತು ಸಂಗ್ರಹಾಲಯ

ಸರ್ಕಾರಿ ವಸ್ತು ಸಂಗ್ರಹಾಲಯ, ಕೃಷ್ಣಗಿರಿ

1

ಕೃಷ್ಣಗಿರಿಯ ಗಾಂಧಿ ರಸ್ತೆಯಲ್ಲಿರುವ ಸರ್ಕಾರಿ ವಸ್ತು ಸಂಗ್ರಹಾಲಯವು ಎಲ್ಲ ವಯೋಮಾನದವರನ್ನು ತನ್ನತ್ತ ಆಕರ್ಷಿಸುತ್ತಿರುವ ಪ್ರವಾಸಿ ಕೇಂದ್ರವಾಗಿದೆ. 1993ರಲ್ಲಿ ಪ್ರಾರಂಭಗೊಂಡ ಈ ವಸ್ತುಸಂಗ್ರಹಾಲಯವು ತನ್ನ ಅಮಿತ ಸಂಗ್ರಹದಿಂದ ಗಮನ ಸೆಳೆಯುತ್ತಿದೆ.ಈ ಸಂಗ್ರಹಾಲಯವು ತಮಿಳು ನಾಡು ರಾಜ್ಯದ ಸಂಪ್ರದಾಯ, ಕಲೆ ಮತ್ತು ವಾಸ್ತು ಶಿಲ್ಪದ ಕುರಿತಾಗಿ ಮಾಹಿತಿಯನ್ನು ಒದಗಿಸುತ್ತದೆ.  ಈ ಸಂಗ್ರಹಾಲಯವು ಮನೋರಂಜನೆಯ ಜೊತೆಗೆ ಶಿಕ್ಷಣವನ್ನು ಒದಗಿಸುತ್ತದೆ.

ಜಾಗತೀಕರಣದ ಈ ಕಾಲದಲ್ಲಿಯು ಈ ವಸ್ತು ಸಂಗ್ರಹಾಲಯವು ಮರೆಯಾಗುತ್ತಿರುವ ಅನುಪಮ ಇತಿಹಾಸ ಮತ್ತು ಸಂಸ್ಕೃತಿಯನ್ನು ಜೀವಂತಗೊಳಿಸುವ ಸನ್ನಿವೇಶವನ್ನು ಒದಗಿಸಿದೆ. ಈ ವಸ್ತು ಸಂಗ್ರಹಾಲಯವು ಐತಿಹಾಸಿಕ ಮೌಲ್ಯವಿರುವ ವಸ್ತುಗಳನ್ನು ಸಂಗ್ರಹಿಸುತ್ತಿದೆ ಮತ್ತು ಅವುಗಳನ್ನು ವರ್ಗೀಕರಿಸುತ್ತಿದೆ. ಹಾಗು ಅವುಗಳ ಕುರಿತಾಗಿ ಸಂಶೋಧನೆಯನ್ನು ಮಾಡುತ್ತಲೆ ಇದೆ. ಈ ವಸ್ತು ಸಂಗ್ರಹಾಲಯದಲ್ಲಿ ಮಾನವ ಶಾಸ್ತ್ರ, ಸಸ್ಯ ಶಾಸ್ತ್ರ, ಪ್ರಾಚ್ಯಶಾಸ್ತ್ರ, ಭೂಗೋಳ, ಪ್ರಾಣಿ ಶಾಸ್ತ್ರ, ಮಕ್ಕಳ ಗ್ಯಾಲರಿ ಮತ್ತು ವರ್ಣಚಿತ್ರಗಳ ಗ್ಯಾಲರಿಗಳೆಂಬ ವಿಭಾಗಗಳಿವೆ.

ಇದು ಸೋಮವಾರದಿಂದ ಗುರುವಾರದವರೆಗೆ ಮತ್ತು ಶನಿವಾರದಂದು ಬೆಳಗ್ಗೆ 9:30 ರಿಂದ ಸಂಜೆ 5:00ರವರೆಗೆ ತೆರೆದಿರುತ್ತದೆ. ಎರಡನೆ ಶನಿವಾರ ಮತ್ತು ಸರ್ಕಾರಿ ರಜಾದಿನಗಳಂದು ಈ ಸಂಗ್ರಹಾಲಯ ತೆಗೆದಿರುವುದಿಲ್ಲ. ಛಾಯಾಗ್ರಹಣದ ಆಸಕ್ತಿ ಹೊಂದಿರುವವರಿಗೆ ಈ ಸಂಗ್ರಹಾಲಯವು ನಿರಾಸೆಯನ್ನುಂಟು ಮಾಡುತ್ತದೆ. ಏಕೆಂದರೆ ಇದರ ಒಳಗಡೆ ಕ್ಯಾಮೆರಾಗೆ ಪ್ರವೇಶವಿಲ್ಲ.

One Way
Return
From (Departure City)
To (Destination City)
Depart On
20 Apr,Sat
Return On
21 Apr,Sun
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
20 Apr,Sat
Check Out
21 Apr,Sun
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
20 Apr,Sat
Return On
21 Apr,Sun