Search
  • Follow NativePlanet
Share
ಮುಖಪುಟ » ಸ್ಥಳಗಳು » ಕ್ಯಾಲಿಕಟ್ » ಹವಾಮಾನ

ಕ್ಯಾಲಿಕಟ್ ಹವಾಮಾನ

ವರ್ಷದ ಎಲ್ಲಾ ಸಮಯದಲ್ಲಿಯೂ ಭೇಟಿ ನೀಡಲು ಕ್ಯಾಲಿಕಟ್‌ ಸೂಕ್ತ ತಾಣ. ಆದರೂ ಜೂನ್‌ ಹಾಗೂ ಜುಲೈನಲ್ಲಿ ಇಲ್ಲಿ ವಿಪರೀತ ಮಳೆ ಸುರಿಯುತ್ತಿರುತ್ತದೆ. ಇದನ್ನು ತಪ್ಪಿಸಿಕೊಂಡು ಬರುವುದು ಉತ್ತಮ. ಮಳೆ ನಿಂತ ನಂತರದ ದಿನ ಅಂದರೆ ಆಗಸ್ಟ್‌ ತಿಂಗಳು ಪ್ರವಾಸಕ್ಕೆ ಉತ್ತಮ ಕಾಲ. ಅಲ್ಲಿಂದ ಫೆಬ್ರವರಿಯಲ್ಲಿ ಬೇಸಿಗೆ ಆರಂಭವಾಗುವವರೆಗೂ ಇತ್ತ ಬರಬಹುದು.

ಬೇಸಿಗೆಗಾಲ

ಕಡಲ ತೀರ ಆಗಿದ್ದರಿಂದ ಬಿರುಸಾದ ಬೇಸಿಗೆಯನ್ನೇ ಇದು ಒಳಗೊಂಡಿರುತ್ತದೆ. ಮಾರ್ಚ್ ನಿಂದ ಸೆಖೆ ಆರಂಭವಾಗುತ್ತದೆ. ಈ ಅವಧಿಯಲ್ಲಿ ಉಷ್ಣಾಂಶ 37 ಡಿಗ್ರಿ ಸೆಲ್ಶಿಯಸ್‌ನಿಂದ 39 ಡಿಗ್ರಿ ಸೆಲ್ಶಿಯಸ್‌ವರೆಗೂ ತಲುಪುತ್ತದೆ. ಬೇಸಿಗೆಯಲ್ಲಿ ಭೇಟಿ ನೀಡುವ ಪ್ರವಾಸಿಗರು ಜತೆಗೆ ಕಾಟನ್‌ ಬಟ್ಟೆ ಹಾಗೂ ಸನ್‌ಗ್ಲಾಸ್‌ನೊಂದಿಗೆ ಬರುವುದು ಉತ್ತಮ.

ಮಳೆಗಾಲ

ಅತಿಯಾದ ಮಳೆ ಇಲ್ಲಾಗುತ್ತದೆ. ಜೂನ್‌ನಿಂದ ಮಳೆಗಾಲ ಆರಂಭವಾಗುತ್ತದೆ. ಈ ಸಂದರ್ಭದಲ್ಲಿ ಇಲ್ಲಿ ವಿಪರೀತ ಮಳೆಯಾಗುತ್ತದೆ. ಸೆಪ್ಟೆಂಬರ್‌ ಆರಂಭದವರೆಗೂ ಮಾನ್ಸೂನು ಮುಂದುವರಿಯುತ್ತದೆ. ಈ ಸಂದರ್ಭದಲ್ಲಿ ಇಲ್ಲಿನ ಆಣೆಕಟ್ಟು, ಕಡಲ ತೀರ ಹಾಗೂ ಇತರೆ ಭಾಗಗಳಿಗೆ ಭೇಟಿ ನೀಡುವುದು ಉತ್ತಮವಲ್ಲ. ಸೆಪ್ಟೆಂಬರ್‌ನಲ್ಲಿ ಓಣಂ ಹಬ್ಬ ನಡೆಯುತ್ತದೆ. ಅದರ ನಂತರ ಇಲ್ಲಿ ನಿರಂತರವಾಗಿ ಹಬ್ಬಗಳ ಅಬ್ಬರ ಶುರುವಾಗುತ್ತದೆ.

ಚಳಿಗಾಲ

ಈ ಸಂದರ್ಭದಲ್ಲಿ ವಿಪರೀತ ಚಳಿ ಇರುತ್ತದೆ. ತಾಪಮಾನ ಮಟ್ಟವೂ ಸಾಕಷ್ಟು ಕುಸಿಯುತ್ತದೆ. ಚಳಿಯಿಂದ ಮೈ ನಡುಕ ಶುರುವಾಗುತ್ತದೆ. ಚಳಿಗಾಲ ಇಲ್ಲಿನ ಹೊರಾಂಗಣ ಚಟುವಟಿಕೆಗೆ ಹೇಳಿ ಮಾಡಿಸಿದ ಸಮಯ. ಟ್ರೆಕ್ಕಿಂಗ್‌, ಕಡಲ ತೀರ ವೀಕ್ಷಣೆ, ಸ್ಥಳ ವೀಕ್ಷಣೆ, ಬೋಟಿಂಗ್‌, ಬಂದರು, ಆಣೆಕಟ್ಟು ವೀಕ್ಷಣೆಗೆ ಸೂಕ್ತ ಸಮಯ. ಈ ಸಂದರ್ಭದಲ್ಲಿ ಚಳಿಗಾಲದ ಉಡುಗೆಯೊಂದಿಗೆ ಪ್ರವಾಸಿಗರು ಬಂದರೆ ಉತ್ತಮ. ರಾತ್ರಿ ಹೊತ್ತು ಕೊಂಚ ಹೆಚ್ಚಾಗಿಯೇ ಚಳಿ ಇರುತ್ತದೆ.