ಕೊಟ್ಖೈನಲ್ಲಿರುವ ಮಹಾಮಾಯಿ ದೇವಸ್ಥಾನವು ಜನಪ್ರಿಯ ಪ್ರವಾಸಿ ತಾಣ. ಇದು ದಟ್ಟ ಹಸಿರಿನ ಮಧ್ಯೆ ಕಂಗೊಳಿಸುತ್ತಿದೆ. ಈ ಪ್ರದೇಶದಲ್ಲಿನ ಪ್ರಶಾಂತ ವಾತಾವರಣವು ದೂರದೂರುಗಳ ಪ್ರವಾಸಿಗರನ್ನು ಆಕರ್ಷಿಸುತ್ತದೆ. ವರ್ಷಂಪ್ರತಿ ಇಲ್ಲಿಗೆ ಭಕ್ತರು ಬರುತ್ತಲೇ ಇರುತ್ತಾರೆ. ಹೀಗಾಗಿ ದೇವಸ್ಥಾನವು ಯಾವಾಗಲೂ ತುಂಬಿತುಳುಕುತ್ತಿರುತ್ತದೆ.