ತಮಿಳುನಾಡಿನ ಕೋತಗಿರಿಯ ಈ ಪ್ರದೇಶದಿಂದ ಕರ್ನಾಟಕದ ಮೈಸೂರು ಮತ್ತು ಸುತ್ತಮುತ್ತಲಿನ ಪ್ರದೇಶವನ್ನು ಕಾಣಬಹುದು. ಇಲ್ಲಿಂದ ಕೋತಗಿರಿಯ ದಾರಿಗಳು ಹಾಗು ಮೈಸೂರು ಪ್ರದೇಶ ಸುಂದರವಾಗಿ ಕಾಣಿಸುತ್ತದೆ. ಇದು ಸಮುದ್ರ ಮಟ್ಟದಿಂದ 2677 ಮೀಟರ್ ಎತ್ತರದಲ್ಲಿದೆ. ನೀಲಗಿರಿಯ ಅತಿ ಎತ್ತರದ 'ದೊಡ್ಡ ಬೆಟ್ಟ' ದ ನಂತರ ಸ್ನೋವ್ಡೆನ್ ಶಿಖರ ಎರಡನೆಯದಾಗಿದೆ. ಇದರ ಶಿಖರದಲ್ಲಿ ಅತ್ಯಂತ ಶೀತ ವಾತಾವರಣವಿದ್ದು ಅಲ್ಲಿಗೆ ಹೋಗುವವರು ತಕ್ಕವ್ಯವಸ್ಥೆಯೊಂದಿಗೆ ಹೋಗಬೇಕು.