Search
  • Follow NativePlanet
Share
ಮುಖಪುಟ » ಸ್ಥಳಗಳು » ಕೋಟಾ » ಹವಾಮಾನ

ಕೋಟಾ ಹವಾಮಾನ

ಅಕ್ಟೋಬರ್ ನಿಂದ ಮಾರ್ಚ್ ವರೆಗಿನ ಅವಧಿಯು ಕೋಟಾಗೆ ಭೇಟಿಕೊಡಲು ಅತ್ಯುತ್ತಮ ಕಾಲವಾಗಿದೆ. ಆಗ ಇಲ್ಲಿ ಹಿತವೆನಿಸುವ ಹವಾಗುಣವನ್ನು ಕಾಣಬಹುದು.

ಬೇಸಿಗೆಗಾಲ

(ಮಾರ್ಚ್ ನಿಂದ ಜೂನ್): ಮಾರ್ಚ್ ತಿಂಗಳಿನಲ್ಲಿ ಶುರುವಾಗುವ ಬೇಸಿಗೆಯು ಜೂನ್ ವರೆಗೆ ಇರುತ್ತದೆ. ಈ ಅವಧಿಯಲ್ಲಿ ಇಲ್ಲಿ ಕನಿಷ್ಠ 30° ಮತ್ತು ಗರಿಷ್ಠ 43° ಸೆಲ್ಶಿಯಸ್ ನಷ್ಟು ಉಷ್ಣಾಂಶವಿರುತ್ತದೆ.

ಮಳೆಗಾಲ

(ಜುಲೈ ನಿಂದ ಸೆಪ್ಟಂಬರ್): ಕೋಟಾದಲ್ಲಿ ಜುಲೈ, ಆಗಸ್ಟ್ ಮತ್ತು ಸೆಪ್ಟಂಬರ್ ತಿಂಗಳುಗಳಲ್ಲಿ ಮಳೆಯನ್ನು ಕಾಣಬಹುದು. ಈ ಸಮಯದಲ್ಲಿ ಇಲ್ಲಿ ಅಧಿಕವಾದ ಆರ್ದ್ರತೆಯನ್ನು ಕಾಣಬಹುದಾಗಿದೆ.

ಚಳಿಗಾಲ

(ನವೆಂಬರ್ ನಿಂದ ಫೆಬ್ರವರಿ): ಕೋಟಾದಲ್ಲಿ ಚಳಿಗಾಲವು ನವೆಂಬರ್ ನಲ್ಲಿ ಪ್ರಾರಂಭಗೊಂಡು ಫೆಬ್ರವರಿಯವರೆಗೆ ಇರುತ್ತದೆ. ಈ ತಿಂಗಳುಗಳಲ್ಲಿ ಹವಾಮಾನವು ಹಿತವಾಗಿ ಮತ್ತು ಮುದನೀಡುವಂತೆ ಇರುತ್ತದೆ. ಈ ಋತುವಿನಲ್ಲಿ ಕೋಟಾದಲ್ಲಿ ಹಿಂದಿನ ದಾಖಲೆಗಳಂತೆ ಕನಿಷ್ಠ 11° ಮತ್ತು ಗರಿಷ್ಠ 25° ಸೆಲ್ಶಿಯಸ್ ಉಷ್ಣಾಂಶ ದಾಖಲಾಗಿದೆ.