ಕನ್ಸುವ ದೇವಾಲಯವು ಕೋಟಾದ ಪ್ರಮುಖ ಧಾರ್ಮಿಕ ತಾಣಗಳಲ್ಲಿ ಒಂದಾಗಿದೆ. ಈ ದೇವಾಲಯವು ಶಿವನ ದೇವಾಲಯವಾಗಿದ್ದು, ಇಲ್ಲಿರುವ ಚತುರ್ಮುಖ ಶಿವನ ಮೂರ್ತಿಗಾಗಿ ಹೆಸರುವಾಸಿಯಾಗಿದೆ. ಭಕ್ತಾಧಿಗಳು ಇಲ್ಲಿನ ದೇವರಿಗೆ ಪ್ರಾರ್ಥನೆಗಳನ್ನು ಸಲ್ಲಿಸಲು ಈ ದೇವಾಲಯಕ್ಕೆ ಅಧಿಕ ಸಂಖ್ಯೆಯಲ್ಲಿ ಆಗಮಿಸುತ್ತಿರುತ್ತಾರೆ. ಕನ್ಸುವ ದೇವಾಲಯದ ಸಮೀಪದಲ್ಲಿ ಇರುವ ಬುಧ್ ಸಿಂಗ್ ಬಾಫ್ನ ಹವೇಲಿ, ಭಿತ್ರಿಯ ಕುಂಡ್, ಆಧಾರ್ ಶೀಲಾ ಮತ್ತು ಟ್ರಾಫಿಕ್ ಪಾರ್ಕ್ ಇಲ್ಲಿರುವ ಪ್ರಮುಖ ಪ್ರವಾಸಿ ಆಕರ್ಷಣೆಗಳಲ್ಲಿ ಸೇರಿದೆ.