Search
  • Follow NativePlanet
Share
ಮುಖಪುಟ » ಸ್ಥಳಗಳು » ಕೋಟಾ » ಆಕರ್ಷಣೆಗಳು » ಸರ್ಕಾರಿ ವಸ್ತು ಸಂಗ್ರಹಾಲಯ

ಸರ್ಕಾರಿ ವಸ್ತು ಸಂಗ್ರಹಾಲಯ, ಕೋಟಾ

3

ಬ್ರಿಜ್ ವಿಲಾಸ್ ಅರಮನೆಯಲ್ಲಿರುವ ಸರ್ಕಾರಿ ವಸ್ತು ಸಂಗ್ರಹಾಲಯವು ಕೋಟಾದ ಜನಪ್ರಿಯ ಪ್ರವಾಸಿ ಆಕರ್ಷಣೆಯಾಗಿದೆ. ಇದು ಕಿಶೋರ್ ಸಾಗರ್ ಕೆರೆಯ ಬಳಿಯಲ್ಲಿ ನೆಲೆಗೊಂಡಿದೆ. ಈ ವಸ್ತು ಸಂಗ್ರಹಾಲಯವು ಹಳೆಯ ನಾಣ್ಯಗಳು, ಪ್ರಾಚೀನ ಹಸ್ತ ಪ್ರತಿಗಳು ಮತ್ತು ಹಡೊಶಿಯೊ ಶಿಲ್ಪಗಳ ಅಸಾಧಾರಣವಾದ ಸಂಗ್ರಹವನ್ನು ಹೊಂದಿದೆ. ಇವುಗಳೆಲ್ಲದರ ಜೊತೆಗೆ ಈ ಸಂಗ್ರಹಾಲಯಕ್ಕೆ ಬರೋಲಿಯಿಂದ ಶಿಲ್ಪಗಳನ್ನು ತಂದು ಪ್ರದರ್ಶಿಸಲಾಗಿದೆ. ಇವೆಲ್ಲವು ನಂಬಲಸಾಧ್ಯವಾಗುವಷ್ಟು ಅದ್ಭುತವಾಗಿವೆ. ಇದೊಂದು ಎತ್ತರವಾಗಿರುವ ಮತ್ತು ಸುಂದರವಾಗಿ ಕೆತ್ತಲಾಗಿರುವ ಒಂದು ಕಲಾಕೃತಿಗಳಾಗಿವೆ. ಇಲ್ಲಿರುವ ಕೆಲವು ಶಿಲ್ಪಗಳು ಸ್ವಲ್ಪ ಹಳೆಯದಾಗಿದ್ದು, ಕೆಲವು ಸುಮಾರು 4 ನೇ ಶತಮಾನಗಳಷ್ಟು ಹಳೆಯದಾಗಿವೆ. ಇಲ್ಲಿ ಪ್ರದರ್ಶನಕ್ಕೆ ಇಡಲಾಗಿರುವ ಹಸ್ತ ಪ್ರತಿಗಳು ಮತ್ತು ವರ್ಣಚಿತ್ರಗಳು ಮಧ್ಯಕಾಲೀನ ಯುಗದ ಸೃಜನಶೀಲ ಮನಸ್ಸುಗಳ ಕುರಿತು ಸಂಪುಟಗಟ್ಟಲೆ ಹೇಳುತ್ತದೆ. ಇದರೊಂದಿಗೆ ಈ ಸಂಗ್ರಹಾಲಯದಲ್ಲಿ ವೀಕ್ಷಕರು ಇಲ್ಲಿ ಸುಂದರವಾದ ವಸ್ತ್ರಗಳನ್ನು ಮತ್ತು ಕರಕುಶಲ ವಸ್ತುಗಳನ್ನು ಕಾಣಬಹುದಾಗಿದೆ.

ಈ ವಸ್ತು ಸಂಗ್ರಹಾಲಯಕ್ಕೆ ಭೇಟಿ ಕೊಡಬೇಕಾದರೆ ಜೈಪುರದ ಪುರಾತತ್ವ ಇಲಾಖೆಯ ನಿರ್ದೇಶಕರಿಂದ ಪೂರ್ವಾನುಮತಿ ಪಡೆಯಬೇಕಾದುದು ಅವಶ್ಯಕವಾಗಿದೆ. ಈ ಸಂಗ್ರಹಾಲಯವು ಶುಕ್ರವಾರ ಮತ್ತು ಸರ್ಕಾರಿ ರಜಾದಿನಗಳಲ್ಲಿ ಮುಚ್ಚಲ್ಪಟ್ಟಿರುತ್ತದೆ. ಕೆಲಸದ ದಿನಗಳಲ್ಲಿ ಈ ವಸ್ತು ಸಂಗ್ರಹಾಲಯವು ಬೆಳಗ್ಗೆ 10 ರಿಂದ ಸಂಜೆ 5 ರವರೆಗೆ ತೆರೆದಿರುತ್ತದೆ. ಇಲ್ಲಿ ಪ್ರವೇಶ ಶುಲ್ಕವಾಗಿ 2 ರೂಪಾಯಿ ಪಾವತಿಸಬೇಕು. ಸಂಗ್ರಹಾಲಯದ ಆವರಣದೊಳಗೆ ಛಾಯಾಚಿತ್ರವನ್ನು ತೆಗೆಯುವುದನ್ನು ನಿರ್ಭಂದಿಸಲಾಗಿದೆ.

One Way
Return
From (Departure City)
To (Destination City)
Depart On
20 Apr,Sat
Return On
21 Apr,Sun
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
20 Apr,Sat
Check Out
21 Apr,Sun
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
20 Apr,Sat
Return On
21 Apr,Sun