ದರ್ರಾ ವನ್ಯ ಜೀವಿ ಧಾಮವನ್ನು 1955 ರಲ್ಲಿ ಸ್ಥಾಪಿಸಲಾಯಿತು. ಮೊದಲಿಗೆ ಇಲ್ಲಿ ವಿಪುಲವಾಗಿ ಖಡ್ಗ ಮೃಗಗಳು, ಜಿಂಕೆಗಳು ಮತ್ತು ಹುಲಿಗಳು ಇದ್ದ ಕಾರಣದಿಂದ ಈ ಕಾಡು ಕೋಟಾದ ರಾಜರಿಗೆ ಬೇಟೆಯಾಡಲು ನೆಚ್ಚಿನ ತಾಣವಾಗಿತ್ತು. ಪ್ರಸ್ತುತ ಈಗ ಈ ವನ್ಯ ಜೀವಿಧಾಮವು ಜಿಂಕೆ, ಕರಡಿ, ತೋಳ, ಹರಿಣಿಗಳು, ಚಿರತೆಗಳು ಮತ್ತು ನೀಲ್ಗಾಯ್ ಗಳು ಸೇರಿದಂತೆ ಹಲವಾರು ಪ್ರಾಣಿ ಪ್ರಭೇದಕ್ಕೆ ಆಶ್ರಯ ನೀಡಿದೆ.