ಇದು ಕೋರಿಯ ಜಿಲ್ಲೆಯಲ್ಲಿರುವ ಒಂದು ಚಿಕ್ಕ ಜಲಪಾತವಾಗಿದೆ. ಇದು ಬಸಿನಪುರ ಹಳ್ಳಿಯ ಸಮೀಪದಲ್ಲಿದ್ದು, ಬೈಕುಂತಪುರದಿಂದ 65 ಕೀಲೊ ಮೀಟರ ದೂರದಲ್ಲಿದೆ. ಈ ಜಲಪಾತವು ಬೆಟ್ಟ ಮತ್ತು ಕಾಡುಗಳಿಂದ ಸುತ್ತುವರೆದಿದೆ. ಬೇಸಿಗೆ ಕಾಲದಲ್ಲಿಯೂ ಸಹ ಈ ಪ್ರದೇಶವು ಹೆಚ್ಚು ತಂಪಾಗಿರುತ್ತದೆ. ನೈಸರ್ಗಿಕ ಹವಾ ನಿಯಂತ್ರಕದಂತೆ ಕೆಲಸ ಮಾಡುತ್ತದೆ.