Search
  • Follow NativePlanet
Share
ಮುಖಪುಟ » ಸ್ಥಳಗಳು » ಕೋನಾರ್ಕ್ » ಆಕರ್ಷಣೆಗಳು » ಮಾಯಾದೇವಿ ದೇವಸ್ಥಾನ

ಮಾಯಾದೇವಿ ದೇವಸ್ಥಾನ, ಕೋನಾರ್ಕ್

1

ಕೋನಾರ್ಕನ ಮಾಯಾ ದೇವಿ ದೇವಸ್ಥಾನವು ಸೂರ್ಯ ದೇವಸ್ಥಾನದ ಸಂಕೀರ್ಣದಲ್ಲಿದೆ. ಈ ದೇವಸ್ಥಾನಕ್ಕೆ ಛಾಯಾ ದೇವಿ ದೇವಸ್ಥಾನ ಎಂಬ ಮತ್ತೊಂದು ಹೆಸರಿದೆ. ಆದ್ದರಿಂದ ಈ ದೇವಸ್ಥಾನವು ಛಾಯಾ ದೇವತೆಗೆ ಮೀಸಲಾಗಿದೆ ಎಂದು ನಂಬಲಾಗಿದೆ. ಈ ದೇವಾಲಯವು ಪವಿತ್ರವಾದ ಜಗನ್ಮೋಹನನ ದ್ವಾರ ಮಂಟಪವನ್ನು ಹೊಂದಿದ್ದು, ಇದು ಎತ್ತರವಾದ ವೇದಿಕೆಯ ಮೇಲಿದೆ. ವೇದಿಕೆಯ ಮುಂಭಾಗವು ಅಧ್ಬುತವಾದ ವಾಸ್ತುಶಿಲ್ಪ ಶೈಲಿಯಿಂದ ಕೂಡಿದೆ. ಈ ಪವಿತ್ರ ದ್ವಾರ ಮಂಟಪವನ್ನು ಬಹು ಹಿಂದೆಯೇ ನಾಶಪಡಿಸಲಾಗಿದೆ. ಆದರೆ ಈಗಲೂ ದ್ವಾರ ಮಂಟಪದ ಒಳಾಂಗಣವು ಅತ್ಯುತ್ತಮ ಶಿಲ್ಪ ವಿನ್ಯಾಸಕ್ಕೆ ಉದಾಹರಣೆಯಾಗಿ ನಿಂತಿದೆ. ಆದರೆ ಇಲ್ಲಿ ಯಾವ ದೇವತೆಯನ್ನು ಪ್ರತಿಷ್ಠಾಪಿಸಲಾಗಿಲ್ಲ. ಖೋಂದಲೈಟ ಕಲ್ಲುಗಳು ದೇವಸ್ಥಾನದ ಸಂಕೀರ್ಣವನ್ನು ಸುತ್ತುವರೆದಿವೆ.

ಈ ದೇವಸ್ಥಾನವನ್ನು ಸೂರ್ಯ ದೇವರ ಪತ್ನಿಯರಲ್ಲಿ ಒಬ್ಬರಾದ ಮಾಯಾ ದೇವಿಗೆ ಗೌರವ ಸಲ್ಲಿಸಲು ನಿರ್ಮಿಸಲಾಗಿದೆ ಎಂಬ ನಂಬಿಕೆ ಇಲ್ಲಿನ ಜನರಲ್ಲಿತ್ತು. ಆದರೆ ಈಗ ಇದನ್ನು ಸೂರ್ಯ ದೇವರ ಪುರಾತನ ದೇವಸ್ಥಾನ ಎಂದು ನಂಬಲಾಗಿದೆ. ಸೂರ್ಯ ದೇವಾಲಯಕ್ಕೆ ಭೇಟಿ ಕೊಡುವ ಪ್ರತಿಯೊಬ್ಬ ಪ್ರವಾಸಿಗನು ಈ ಮಾಯಾ ದೇವಿ ದೇವಸ್ಥಾನಕ್ಕೆ ಭೇಟಿ ನೀಡುತ್ತಾನೆ.

One Way
Return
From (Departure City)
To (Destination City)
Depart On
20 Apr,Sat
Return On
21 Apr,Sun
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
20 Apr,Sat
Check Out
21 Apr,Sun
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
20 Apr,Sat
Return On
21 Apr,Sun