Search
  • Follow NativePlanet
Share
ಮುಖಪುಟ » ಸ್ಥಳಗಳು » ಕೋಲಾರ » ಆಕರ್ಷಣೆಗಳು » ಕೋಟಿಲಿಂಗೇಶ್ವರ

ಕೋಟಿಲಿಂಗೇಶ್ವರ, ಕೋಲಾರ

3

ಕೋಲಾರ ಜಿಲ್ಲೆಯಲ್ಲಿ ಸುತ್ತಾಡಲು ಬಯಸುವ ಪ್ರವಾಸಿಗರು ಕೋಟಿ ಲಿಂಗೇಶ್ವರ ದೇವಾಲಯಕ್ಕೆ ಒಮ್ಮೆ ಭೇಟಿಕೊಡಬಹುದು. ಈ ದೇವಾಲಯವು ಕಮ್ಮಸಂದ್ರ ಗ್ರಾಮದಲ್ಲಿದೆ. ಈ ದೇವಾಲಯದಲ್ಲಿ 108 ಅಡಿಗಳ ಬೃಹತ್ ಲಿಂಗವನ್ನು ಸ್ವಾಮಿ ಸಾಂಬ ಶಿವಮೂರ್ತಿಯವರು  ನಿರ್ಮಿಸಿದರು. ಇದು ವಿಶ್ವದಲ್ಲಿಯೆ ಅತ್ಯಂತ ದೊಡ್ಡ ಶಿವಲಿಂಗವೆಂದು ಪರಿಗಣಿಸಲ್ಪಟ್ಟಿದೆ. ಭಕ್ತಾದಿಗಳು ಇಲ್ಲಿ 35 ಅಡಿಗಳಷ್ಟು ಎತ್ತರದ ಶಿವನ ವಾಹನವಾದ ನಂದಿಯ ವಿಗ್ರಹವನ್ನು ಸಹ ನೋಡಬಹುದು. ಇದು ಇಲ್ಲಿನ ಶಿವಲಿಂಗದ ಎದುರಿಗಿದೆ.ಮಹಾಶಿವರಾತ್ರಿಯ ಸಂದರ್ಭದಲ್ಲಿ ದೇಶದ ನಾನಾ ಭಾಗಗಳಿಂದ ಭಕ್ತಾದಿಗಳು ಕೋಟಿಲಿಂಗೇಶ್ವರಕ್ಕೆ ಆಗಮಿಸುತ್ತಾರೆ. ಭಕ್ತಾದಿಗಳು ಇಲ್ಲಿ ಮಹಾವಿಷ್ಣು, ಶ್ರೀ ರಾಮ, ಮಹೇಶ್ವರ, ಆಂಜನೇಯ ಸ್ವಾಮಿ, ಅನ್ನಪೂರ್ಣೇಶ್ವರಿ ದೇವಿ ಮತ್ತು ಬ್ರಹ್ಮ ದೇವರುಗಳ ಮೂರ್ತಿಗಳನ್ನು ನೋಡಬಹುದು. ಅಲ್ಲದೆ ಕನ್ನಿಕಾಪರಮೇಶ್ವರಿ ದೇವಿ, ವೆಂಕಟರಮಣಸ್ವಾಮಿ, ಕರುಮಾರಿಯಮ್ಮ ದೇವಿ ಮತ್ತು ಪಾಂಡುರಂಗ ಸ್ವಾಮಿಯ ದೇವಾಲಯಗಳು ಇಲ್ಲಿವೆ.ಭಕ್ತಾಧಿಗಳು ಇಲ್ಲಿನ ದೇವಾಲಯಕ್ಕೆ ಇಲ್ಲಿಯೆ ದೊರೆಯುವ ಲಿಂಗಗಳನ್ನು ಕೊಂಡು ಸಮರ್ಪಿಸುವ ಮೂಲಕ ತಮ್ಮ ಹರಕೆಗಳನ್ನು, ಪೂಜೆಗಳನ್ನು ಸಲ್ಲಿಸುತ್ತಾರೆ. ಹತ್ತು ಜನ ಅರ್ಚಕರು ಪ್ರತಿ ದಿನ ಎರಡು ಬಾರಿ ಬೆಳಗ್ಗೆ 6 ಮತ್ತು ಸಂಜೆ  6ಕ್ಕೆ ಪೂಜೆಗಳು ನಡೆಯುತ್ತವೆ. ಇಲ್ಲಿನ ಅರ್ಚಕರು ಇಲ್ಲಿರುವ ಪ್ರತಿ ಲಿಂಗಗಳಿಗೆ ಸಂಗೀತ ವಾದ್ಯಗಳ ಜೊತೆಗೆ ಮಂತ್ರಗಳನ್ನು ಪಠಿಸುತ್ತ ಅಭಷೇಕಗಳನ್ನು ಮಾಡುತ್ತಾರೆ.

One Way
Return
From (Departure City)
To (Destination City)
Depart On
28 Mar,Thu
Return On
29 Mar,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
28 Mar,Thu
Check Out
29 Mar,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
28 Mar,Thu
Return On
29 Mar,Fri