ನೀವು ಪ್ರವಾಸಿಗನ್ನಲ್ಲದೆ ಯಾತ್ರಿಕನಾಗಿದ್ದರೆ ಕೊಹಿಮಾವನ್ನು ಪರಿಶೋಧಿಸಲು ಮೋಟಾರ್ ಸೈಕಲ್ ಸವಾರಿ ಅತ್ಯುತ್ತಮ ಮಾರ್ಗ. ರಮಣೀಯ ಪ್ರಾಕೃತಿಕ ಸೌಂದರ್ಯವನ್ನು ಹೊಂದಿರುವ ಈಶಾನ್ಯದ ಕೊಹಿಮಾದಲ್ಲಿ ಪ್ರವಾಸಿಗರು ತೀಕ್ಷ್ಣವಾದ ಶಿಖರಗಳು ಮತ್ತು ಕಣೆವೆಗಳನ್ನು ನೋಡಬಹುದಾಗಿದೆ. ಕೆಲವು ಏಜೆನ್ಸಿಗಳು ಬೈಕ್ ನ್ನು ಬಾಡಿಗೆಗೆ ನೀಡುತ್ತವೆ ಮತ್ತು ಇದರ ಮೇಲೇರಿ ನೀವು ನಗರದ ಸೌಂದರ್ಯವನ್ನು ಸವಿಯಬಹುದಾಗಿದೆ. ಝೂಕೊ ಕಣೆವೆಗೆ ಭೇಟಿ ಮತ್ತು ಟ್ರೆಕ್ಕಿಂಗ್ ನ್ನು ತಪ್ಪಿಸಿಕೊಳ್ಳಬಾರದು. ಇದನ್ನು ಹೊರತುಪಡಿಸಿ ಜಫೂ ಪೀಕ್ ಮತ್ತು ಪುಲೆಬದ್ಜೆ ಪೀಕ್ ಗೆ ಕೂಡ ಭೇಟಿ ನೀಡಬೇಕು.
ಸ್ಥಳೀಯ ಗೈಡ್ ಅನ್ನು ಪಡೆದರೆ ಆತ ಅಥವಾ ಆಕೆ ನಿಮಗೆ ಕೆಲವು ಅಮೋಘ ಸ್ಥಳಗಳನ್ನು ತೋರಿಸುತ್ತಾರೆ. ಇದರ ಬಗ್ಗೆ ಹೆಚ್ಚಿನ ಪ್ರವಾಸಿಗರಿಗೆ ತಿಳಿದಿರುವುದಿಲ್ಲ ಮತ್ತು ಈ ಪ್ರದೇಶಗಳ ಆಂತರಿಕ ಸೌಂದರ್ಯವನ್ನು ನೋಡಬಹುದು. ಈ ಪ್ರದೇಶಗಳು ಹಿಂದೆ ಬಂಡಾಯ ಮತ್ತು ಕೋಮುಗಲಭೆಗೆ ಸಾಕ್ಷಿಯಾದ ಕಾರಣ ಗೈಡ್ ಗಳಿದ್ದರೆ ನಿಮ್ಮ ಸುರಕ್ಷತೆ ಬಗ್ಗೆ ಹೆದರಬೇಕಿಲ್ಲ.