"ನೀವು ಮನೆಗೆ ಹೋದಾಗ, ಅವರಿಗೆ ನಮ್ಮ ಬಗ್ಗೆ ತಿಳಿಸಿ ಮತ್ತು ಹೇಳಿ: `ನಿಮ್ಮ ನಾಳೆಗಾಗಿ ನಾವು ನಮ್ಮ ಇವತ್ತನ್ನು ನೀಡಿದ್ದೇವೆ". ಇದು ಸೈನಿಕರಿಗೆ ಗೌರವ ಸಲ್ಲಿಸಿರುವ ಕೊಹಿಮಾ ಸ್ಮಾರಕದ ಪ್ರವೇಶದ್ವಾರದಲ್ಲಿ ಬರೆದಿರುವಂತಹ ಸಾಲುಗಳು. ಕೊಹಿಮಾ ಯುದ್ಧ ಸ್ಮಾರಕದಲ್ಲಿರುವ 1421 ಚಪ್ಪಡಿಗಳು ಇಲ್ಲಿನ ಪ್ರಮುಖ ಆಕರ್ಷಣೆ. ಇದು ಎರಡನೇ ವಿಶ್ವಯುದ್ಧದ ವೇಳೆ ಏಶ್ಯಾದಲ್ಲಿ ನಡೆದ ಯುದ್ಧದ ಅತ್ಯಂತ ಕರಾಳಮುಖವನ್ನು ತೋರಿಸುತ್ತದೆ. ಪ್ರತಿಯೊಂದು ಸಮಾಧಿಯಲ್ಲಿ ಕಂಚಿನ ಫಲಕದಲ್ಲಿ ಬರೆಯಲಾಗಿರುವ ಸ್ಮಾರಕಲೇಖನವಿದೆ.
ಈ ಸ್ಮಾರಕವನ್ನು ಕಾಮನ್ವೆಲ್ತ್ ಯುದ್ಧ ಸ್ಮಾರಕ ಸಮಿತಿ ನಿರ್ವಹಣೆ ಮಾಡುತ್ತದೆ ಮತ್ತು ಇದನ್ನು ಗ್ಯಾರಿಸನ್ ಹಿಲ್ ನಲ್ಲಿ ಈ ಸ್ಮಾರಕವಿದೆ. ಇಂಗ್ಲೆಂಡ್ ಮತ್ತು ಕೆನಡಾ ಸಹಿತ ವಿಶ್ವದ ವಿವಿಧ ದೇಶಗಳಿಂದ ಸಾವಿರಾರು ಪ್ರವಾಸಿಗಳು ಎರಡನೇ ಮಹಾಯುದ್ಧ ವೇಳೆ ಜೀವತೆತ್ತ ಸೈನಿಕರಿಗಾಗಿ ನಮನ ಸಲ್ಲಿಸಲು ಇಲ್ಲಿಗೆ ಆಗಮಿಸುತ್ತಾರೆ.