Search
  • Follow NativePlanet
Share
ಮುಖಪುಟ » ಸ್ಥಳಗಳು » ಕೊಡುಂಗಲ್ಲೂರ್ » ಹವಾಮಾನ

ಕೊಡುಂಗಲ್ಲೂರ್ ಹವಾಮಾನ

ಕೊಡುಂಗಲ್ಲೂರ್ ಮಿಶ್ರ ಹವಾಗುಣವನ್ನು ಹೊಂದಿದ್ದು, ಮಳೆಗಾಲದ ಹೊರತಾಗಿ ವರ್ಷದ ಎಲ್ಲಾ ಕಾಲದಲ್ಲಿ ಪ್ರವಾಸಿಗರನ್ನು ತನ್ನತ್ತ ಆಕರ್ಷಿಸುತ್ತದೆ. ಆದರು ಡಿಸೆಂಬರ್‌ನಿಂದ ಫೆಬ್ರವರಿ ನಡುವಿನ ಕಾಲವು ಇಲ್ಲಿಗೆ ಭೇಟಿಕೊಡಲು ಅತ್ಯುತ್ತಮ ಕಾಲವಾಗಿದೆ. ಆಗಸ್ಟ್‌‍ನಿಂದ ನವೆಂಬರ್ ನಡುವಿನ ಕಾಲದಲ್ಲಿ ಇಲ್ಲಿ ಹಲವಾರು ಹಬ್ಬ ಹರಿದಿನಗಳು ಮತ್ತು ಉತ್ಸವಗಳು ಜರುಗುವುದರಿಂದ ಈ ಅವಧಿಯಲ್ಲಿಯು ಇಲ್ಲಿಗೆ ಭೇಟಿಕೊಡಲು ಉತ್ತಮ ಸಮಯವಾಗಿದೆ.

ಬೇಸಿಗೆಗಾಲ

ಬೇಸಿಗೆಗಳು ಕೊಡುಂಗಲ್ಲೂರಿನಲ್ಲಿ ಮಾರ್ಚ್‍ನಲ್ಲಿ ಆರಂಭವಾಗಿ ಮೇವರೆಗೆ ಇರುತ್ತದೆ. ಈ ಋತುವಿನಲ್ಲಿ ಇಲ್ಲಿ ಒಣ ಹವೆಯಿರುತ್ತದೆ ಹಾಗು ಈ ಸಮಯದಲ್ಲಿ ಇಲ್ಲಿನ ಉಷ್ಣಾಂಶವು 39°ಸೆಲ್ಶಿಯಸ್ ಇರುತ್ತದೆ. ಈ ಸಮಯದಲ್ಲಿ ಇಲ್ಲಿನ ದೇವಾಲಯಗಳಿಗೆ ಹಾಗು ಸುತ್ತ ಮುತ್ತಲಿನ ಪ್ರಾಂತ್ಯಗಳಿಗೆ ಭೇಟಿಕೊಡಲು ಉತ್ತಮ ಕಾಲವಾಗಿದೆ. ಆದರೆ ಪ್ರವಾಸಿಗರು ಇಲ್ಲಿಗೆ ಬರುವಾಗ ಬೇಸಿಗೆ ಉಡುಗೆಗಳನ್ನು ತರುವುದನ್ನು ಮರೆಯಬಾರದು.

ಮಳೆಗಾಲ

ಕೊಡುಂಗಲ್ಲೂರಿನಲ್ಲಿ ಮಳೆಗಾಲವು ಆರ್ದ್ರತೆಯಿಂದ ಕೂಡಿರುತ್ತವೆ. ಈ ಕಾಲವು ಜೂನ್‍ನಿಂದ ಸೆಪ್ಟಂಬರ್ ವರೆಗೆ ಇರುತ್ತದೆ. ಈ ಪಟ್ಟಣವು ಅತ್ಯಧಿಕ ಮಳೆಯನ್ನು ಪಡೆಯುತ್ತದೆ. ವರ್ಷಧಾರೆಯು ಇಲ್ಲಿ ನಾಲ್ಕು ತಿಂಗಳುಗಳು ಎಡೆಬಿಡದೆ ಬೀಳುತ್ತಿರುತ್ತದೆ. ಈ ಸಮಯದಲ್ಲಿ ಇಲ್ಲಿ ಹೊರಾಂಗಣ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಲು ಆಗುವುದಿಲ್ಲವಾದ್ದರಿಂದ ಇಲ್ಲಿಗೆ ಭೇಟಿ ಕೊಡುವುದನ್ನು ಮುಂದೂಡುವುದು ಉತ್ತಮ.

ಚಳಿಗಾಲ

ಚಳಿಗಾಲವು ಇಲ್ಲಿ ಬೆಚ್ಚಗೆ ಮತ್ತು ಆಹ್ಲಾದಕರವಾಗಿರುತ್ತವೆ. ಇಲ್ಲಿ ಚಳಿಗಾಲವು ಡಿಸೆಂಬರ್‌ನಲ್ಲಿ ಪ್ರಾರಂಭವಾಗಿ ಫೆಬ್ರವರಿ ಯವರೆಗೆ ಇರುತ್ತದೆ. ಆಗ ಇಲ್ಲಿ ಉಷ್ಣಾಂಶವು 22° ಯಿಂದ 32° ಸೆಲ್ಶಿಯಸ್ ವರೆಗೆ ಇರುತ್ತದೆ. ಕೊಡುಂಗಲ್ಲೂರಿಗೆ ಭೇಟಿಕೊಡಲು ಈ ಕಾಲವು ಹೇಳಿ ಮಾಡಿಸಿದ ಕಾಲವಾಗಿದೆ.