Search
  • Follow NativePlanet
Share
ಮುಖಪುಟ » ಸ್ಥಳಗಳು » ಕೊಡುಂಗಲ್ಲೂರ್ » ಆಕರ್ಷಣೆಗಳು » ಕುರುಂಬಕಾವು ದೇವಾಲಯ

ಕುರುಂಬಕಾವು ದೇವಾಲಯ, ಕೊಡುಂಗಲ್ಲೂರ್

1

ಕುರುಂಬಕಾವು ದೇವಾಲಯ ಕೊಡುಂಗಲ್ಲೂರಿನ ಮತ್ತೊಂದು ಪ್ರಸಿದ್ಧ ಪ್ರವಾಸಿ ಆಕರ್ಷಣೆಯಾಗಿದೆ. ಇಲ್ಲಿ ಶಕ್ತಿ ದೇವತೆಯಾದ ಭಗವತಿ ದೇವಿಯು ಪೂಜಿಸಲ್ಪಡುತ್ತಾಳೆ. ಈ ದೇವಾಲಯದಲ್ಲಿ ಅಷ್ಟ ಭುಜಗಳಲ್ಲಿ ಆಯುಧಗಳನ್ನು ಹಿಡಿದು ನಿಂತಿರುವ ಭಗವತಿ ದೇವಿಯ ನಯನ ಮನೋಹರವಾದ ವಿಗ್ರಹವನ್ನು ನೋಡಬಹುದು. ದಾರುಕ (ರಾಕ್ಷಸ) ನ ರುಂಡ, ಘಂಟೆ, ಕಾಲು ಬಳೆ ಮತ್ತು ರಕ್ತದ ಪಾತ್ರೆಗಳು ಈ ದೇವಿಯನ್ನು ಅಲಂಕರಿಸಿವೆ.

ಈ ದೇವಾಲಯ ಸಂಕೀರ್ಣದಲ್ಲಿ ವಸೂರಿಮಲ ಮತ್ತು ತವಿಟ್ಟುಮೂರ್ತಿಗಳೆಂಬ ಎರಡು ಮೂರ್ತಿಗಳನ್ನು ಕಾಣಬಹುದು.  ಈ ಪ್ರಾಚೀನ ದೇವಾಲಯವು ಹಬ್ಬ ಹರಿದಿನಗಳಂದು ಸಾವಿರಾರು ಭಕ್ತಾಧಿಗಳನ್ನು ತನ್ನತ್ತ ಆಕರ್ಷಿಸುತ್ತದೆ. ಭರಣಿ ಉತ್ಸವ ಅಥವಾ ಕವುಥಿಂಡಲ್ ಎಂದು ಕರೆಯಲಾಗುವ ಉತ್ಸವವು ಈ ದೇವಾಲಯದಲ್ಲಿ ಆಚರಿಸಲ್ಪಡುವ ಮುಖ್ಯ ಉತ್ಸವವಾಗಿದೆ.

ಕುರುಂಬಕಾವು ದೇವಾಲಯವು ಇಲ್ಲಿನ ನಂಬಿಕೆಗಳ ಮತ್ತು ಸ್ಥಳ ಪುರಾಣಗಳ ಶ್ರೀಮಂತಿಕೆಯನ್ನು ಹೊಂದಿದೆ. ಕನ್ನಗಿ ಚರಿತಂ ( ಕನ್ನಗಿಯ ಕಥೆ) ಮತ್ತು ದಾರುಕ ನಿಗ್ರಹಂ ಎಂಬ ಎರಡು ಪ್ರಮುಖ ಕಥೆಗಳು ಈ ದೇವಾಲಯದೊಂದಿಗೆ ಸಂಬಂಧಿಸಿವೆ. ಈ ದೇಗುಲದ ವಾತಾವರಣದ ಕಣಕಣದಲ್ಲಿ ಭಕ್ತಿ ಭಾವಗಳು ಮತ್ತು ಮಂತ್ರಘೋಷಗಳು ಅನುರಣಿಸುತ್ತ ಭಕ್ತಾಧಿಗಳನ್ನು ಪರವಶಗೊಳಿಸುತ್ತವೆ.

One Way
Return
From (Departure City)
To (Destination City)
Depart On
18 Apr,Thu
Return On
19 Apr,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
18 Apr,Thu
Check Out
19 Apr,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
18 Apr,Thu
Return On
19 Apr,Fri