ಬ್ರೈಯಂಟ್ ಪಾರ್ಕ್ ಬಸ್ ನಿಲ್ದಾಣದಿಂದ ಕೇವಲ ಅರ್ಧ ಕಿ.ಮೀ ದೂರದಲ್ಲಿರುವ ಒಂದು ಉದ್ಯಾನವನವಾಗಿದೆ. ಇದೊಂದು ಅಚ್ಚುಕಟ್ಟಾಗಿ ನಿರ್ವಹಿಸಲಾಗಿರುವ ಒಂದು ಬೊಟಾನಿಕಲ್ ಗಾರ್ಡನ್ ಆಗಿದೆ. ಈ ಉದ್ಯಾನವನಕ್ಕೆ 1908ರಲ್ಲಿ ವಿನ್ಯಾಸ ಸಿದ್ಧಪಡಿಸಿ, ನಿರ್ಮಾಣವನ್ನು ಸಹ ಮಾಡಿದ ಅರಣ್ಯ ಅಧಿಕಾರಿ ಎಚ್,ಡಿ,ಬ್ರೈಯಂಟ್ರವರ ಹೆಸರನ್ನು ಇಡಲಾಗಿದೆ. ಈ ಉದ್ಯಾನವನದಲ್ಲಿ ವೈವಿಧ್ಯಮಯವಾದ ಪೊದೆಗಳು, ಮರಗಳು ಮತ್ತು ಕ್ಯಾಕ್ಟಸ್ಗಳು ಇವೆ. ಈ ಉದ್ಯಾನವನವು ತನ್ನ ಉತ್ತುಂಗ ಕಾಲದಲ್ಲಿ ಬಣ್ಣ ಬಣ್ಣದ ಹೂವುಗಳಿಂದ ಕೂಡಿರುತ್ತದೆ.
ಈ ಉದ್ಯಾನವನದಲ್ಲಿ 1857ರಲ್ಲಿ ನೆಡಲಾದ ಒಂದು ನೀಲಗಿರಿ ಮರ ಮತ್ತು ಬೋಧಿ ವೃಕ್ಷವನ್ನು ಸಹ ನೋಡಬಹುದು. ಬೋಧಿ ವೃಕ್ಷದಿಂದ ಈ ಉದ್ಯಾನವನಕ್ಕೆ ಧಾರ್ಮಿಕ ಮಹತ್ವ ಸಹ ಬಂದಿದೆ. ಇಲ್ಲಿ ಒಂದು ನರ್ಸರಿ ಸಹ ಇದ್ದು, ಇದು ಪ್ರವಾಸಿಗರಿಗೆ ಕೆಲವು ಅಂದದ ಗಿಡಗಳನ್ನು ಸಹ ಕೊಳ್ಳಲು ಅವಕಾಶ ಮಾಡಿಕೊಡುತ್ತದೆ.