ಸಮುದ್ರ ಮಟ್ಟದಿಂದ ರಿಬ್ಬಾ 3745 ಮೀಟರ್ ಎತ್ತರದಲ್ಲಿದೆ. ಕಿನ್ನೌರ್ ನ ದೊಡ್ಡ ಮತ್ತು ಜನನಿಬಿಡ ಹಳ್ಳಿ ಇದಾಗಿದೆ. ರಿಸ್ಪಾ ಮತ್ತು ಪುರ್ಬಾನಿ ಹಳ್ಳಿಗಳ ಮಧ್ಯದಲ್ಲಿ ಇರುವ ಈ ಸ್ಥಳವನ್ನು, ಈ ಸ್ಥಳವನ್ನು ರಿರಾಂಗ್ ಎಂಬ ಹೆಸರಿನಿಂದಲೂ ಕರೆಯಲಾಗುತ್ತದೆ. ಸ್ಥಳಿಯ ಆಡುಭಾಷೆಯ ಪ್ರಕಾರ, ರಿ ಅಂದರೆ ಛಿಲ್ಗೋಜಾ ಎಂದು ಅರ್ಥ ಮತ್ತು ರಂಗ್ ಅಂದರೆ ಪರ್ವತ ಶಿಖರ ಎಂಬ ಅರ್ಥ ಬರುತ್ತದೆ. ದ್ರಾಕ್ಷಿತೊಟಗಳು ಇಲ್ಲಿನ ವಿಶೇಷ.