ಕಿನ್ನೌರ್ ಜಿಲ್ಲೆಯ ಪ್ರಮುಖ ಮಠೀಯ ಕ್ಷೇತ್ರವಾದ ಕನಂ ಅನ್ನು 'ದೇವರ ಭೂಮಿ' ಎಂದೂ ಕರೆಯಲಾಗುತ್ತದೆ. ಈ ಸ್ಥಳವು ರಿನ್-ಚಾನ್-ಸ್ಯಾಂಗ್-ಪೊ ನಿಂದ ನಿರ್ಮಿಸಲಾದ 7 ದೊಡ್ಡ ಮತ್ತು ಸಣ್ಣ ಮಂದಿರಗಳಿಗೆ ಹೆಸರುವಾಸಿಯಾಗಿದ್ದು, ಈ ಪ್ರದೇಶದ ಸ್ಥಳೀಯವಾಗಿ ಆರಾಧಿಸಲ್ಪಡುವ ದೇವತೆ ದಬಲ್-ಶು (ಜೊ-ಚೆಂಬೋಜಿ). ಇವುಗಳಲ್ಲಿ ಒಂದು ಮಠವು ಹಳ್ಳಿಯ ಮೇಲ್ಭಾಗದಲ್ಲಿ ನಿರ್ಮಾಣವಾಗಿದ್ದು, 25 ಕೊಠಡಿಗಳನ್ನು ಹೊಂದಿದೆ. ಪ್ರವಾಸಿಗರು ಇಲ್ಲಿ, ಲಾಮಾ ಧರ್ಮದ ಆಚಾರ-ವಿಚಾರಗಳ ಕುರಿತಾದ ಕಂಜೂರ್ ಮತ್ತು ತಂಜೂರ್ ಸಂಬಂಧಿಸಿದ ವಿಶ್ವಕೋಶದ ಪ್ರತಿಗಳನ್ನು ಇಲ್ಲಿ ಕಾಣಬಹುದು. ಇಲ್ಲಿ ಸನ್ಯಾಸಿಗಳು ನೆಲೆಸುತ್ತಾರೆ.
ನೀಲಿ ಕೂದಲು ಹೊಂದಿರುವ ಸ್ವರ್ಣಲೇಪಿತ ಕಂಚಿನ ಬುದ್ಧನ ವಿಗ್ರಹ ಇಲ್ಲಿನ ವಿಶೇಷ. ಇದು ನೆಸ್ಸಾಂಗ್ ವ್ಯಾಲಿಯ ಬುಡದಲ್ಲಿ ಇದೆ. ಕನಂ ಟಿಬೇಟಿನೊಂದಿಗೆ ಹೊಂದಿರುವ ಹಳೆಯ ವ್ಯಾಪಾರ ಮಾರ್ಗಗಳಲ್ಲಿ ಇದು ಒಂದಾಗಿದೆ.