ಅಸಿರ್ ಘರ್ ಕೋಟೆ ಅಥವಾ ಅಸಿಘರ್ ಕಿಲ್ಲಾ ಅಹಿರ್ ಸಾಮ್ರಾಜ್ಯದ ಅಸ್ಸಾ ಅಹಿರ್ ನಿರ್ಮಿಸಿದ. ಈ ಕೋಟೆಯನ್ನು ಮೊದಲಿಗೆ ಅಸ್ಸಾ ಅಹಿರ್ ಘರ್ ಎಂದು ಕರೆಯಲಾಗುತ್ತಿತ್ತು. ಕಾಲಕ್ರಮೇಣ ಅದರ ಹೆಸರು ಅಸಿರ್ ಘರ್ ಕೋಟೆ ಎಂದು ಬದಲಾಗಿದೆ.
ಸ್ಥಳೀಯರ ಪ್ರಕಾರ, ಈ ಕೋಟೆಯನ್ನು ಯಾರೂ ಬಲವಂತವಾಗಿ ಆಕ್ರಮಿಸಿ, ವಶಪಡಿಸಿಕೊಳ್ಳಲು ಆಗುತ್ತಿರಲಿಲ್ಲ. ಇತಿಹಾಸ ಹೇಳುವಂತೆ, ಅಕ್ಬರ್ ಕೂಡ ಈ ಕೋಟೆಯನ್ನು ವಶಪಡಿಸಿಕೊಳ್ಳಲು ಸೋತ. ಇದಕ್ಕೆ ಕಾರಣ, ಈ ಕೋಟೆಯನ್ನು ಅಷ್ಟು ಸುಭದ್ರವಾಗಿ ಕಟ್ಟಿಸಿರುವ ರೀತಿ. ಈ ಸ್ಥಳ ಖಾಂಡ್ವಾದಿಂದ 69 ಕಿ.ಮೀ. ದೂರದಲ್ಲಿದೆ. ಕಣಿವೆಯ ಹೃದ್ಭಾಗದಲ್ಲಿ ಈ ಕೋಟೆಯನ್ನು ಕಟ್ಟಿರುವುದರಿಂದ ಇದು ನರ್ಮದಾ ಕಣಿವೆ ಹಾಗು ತಪ್ತಿ ನದಿಗೆ ಸತ್ವುರೆ ಬೆಟ್ಟಗಳಿಂದ ಸೇರಿಕೊಂಡಿದೆ.
ಅಸಿರ್ ಘರ್ ಕೋಟೆಯ ಕಟ್ಟಡದ ಮಾದರಿ ಮುಘಲ್ ಶೈಲಿಯನ್ನು ಪ್ರತಿಬಿಂಬಿಸುತ್ತದೆ. ಇದು ಪರ್ಶಿಯನ್, ಇಸ್ಲಾಮಿಕ್, ಟರ್ಕಿಶ್ ಮತ್ತು ಭಾರತದ ಶೈಲಿಯ ಕಲಾಕೃತಿಯ ಸಮ್ಮಿಲನವಾಗಿದೆ.