ರೈವುಡ್ ಎನ್ನುವುದು ದೊಡ್ಡದಾದ ಮತ್ತು ಸುಂದರವಾದ ಉದ್ಯಾನವನವಾಗಿದ್ದು, ಭವ್ಯವಾದ ಮರಗಳಿಂದ ಕೂಡಿದೆ. ಇದು ಲೋನಾವಲಾ ಮತ್ತು ಖಂಡಾಲಾದ ನಡುವೆ ನೆಲೆಗೊಂಡಿದೆ. ಈ ಹೆಸರಿನ ಹಿಂದೆ ಒಂದು ಕುತೂಹಲಕರಿಯಾದ ಸಂಗತಿಯಿದೆ. ಕೆಲವರ ಪ್ರಕಾರ, ಆಂಗ್ಲ ಆಫಿಸರ್ ರೈ ಅವರಿಂದ ಈ ಮರಗಳಿಗೆ ಈ ಹೆಸರು ಬಂದಿತು ಎನ್ನುತ್ತಾರೆ. ಆದರೆ ಕೆಲವರು ರೈವುಡ್ ಎಂಬುದು ಮರಾಠಿ ಪದ " ರೈ" ನಿಂದ ಬಂದಿತು ಎಂದು ಹೇಳುತ್ತಾರೆ. ಈ ಉದ್ಯಾನವನದಲ್ಲಿ ದಶಕಗಳಷ್ಟು ಹಳೆಯದಾದ ಮರಗಳನ್ನು ನಾವು ಕಾಣಬಹುದು. ಮೊದಲಿಗೆ ಇದು ಬೊಟಾನಿಕಲ್ ಗಾರ್ಡನ್ ಆಗಿತ್ತು. ಆದರೆ ನಂತರದಲ್ಲಿ ಇದನ್ನು ಉದ್ಯಾನವನವಾಗಿ ಮಾರ್ಪಾಡು ಮಾಡಲಾಯಿತು.
ಇಲ್ಲಿ ಒಂದು ಹಳೆಯ ಮಹಾದೇವ ದೇವಾಲಯವಿದೆ. ಈ ಉದ್ಯಾನವನದಲ್ಲಿ ವಿಶಾಲವಾದ ಮೈದಾನವಿದ್ದು, ಮಕ್ಕಳು ಆಟವಾಡಲು ಅವಕಾಶವಿದೆ.