ನೀವು ಉತ್ಸಾಹಿ ಸಾಹಸ ಕ್ರೀಡಾಭಿಮಾನಿಯಾಗಿದ್ದು, ಸಾಹಸ ಕ್ರೀಡೆಯಲ್ಲಿ ಪಾಲ್ಗೊಳ್ಳಲು ಬಯಸುವಿರಾದರೆ ಖಂಡಾಲಾದಲ್ಲಿ ನೀವು ಹುಚ್ಚೆದ್ದು ಕುಣಿಯುವಂತೆ ಮಾಡುವ ಶಿಲಾರೋಹಣದ ಅವಕಾಶಗಳು ಲಭಿಸುತ್ತವೆ. ನೀವು ಇಲ್ಲಿ ಡ್ಯೂಕ್ಸ್ ನೋಸ್ ಶಿಖರವನ್ನು ಏರುವ ಅವಕಾಶವನ್ನು ಪಡೆಯಬಹುದು. ಇದರೊಂದಿಗೆ ಕಾರ್ಲ ಬೆಟ್ಟಗಳು ಮತ್ತು ಇನ್ನಿತರ ಬೆಟ್ಟಗಳನ್ನು ಏರುವ ಅವಕಾಶ ಸಿಗುತ್ತದೆ. ಡ್ಯೂಕ್ಸ್ ನೋಸ್ ಶಿಖರದಿಂದ ಸುತ್ತ ಮುತ್ತಲ ಪ್ರದೇಶದ ಸುಂದರ ವಿಹಂಗಮ ನೋಟವನ್ನು ಕಾಣಬಹುದು.