Search
  • Follow NativePlanet
Share
ಮುಖಪುಟ » ಸ್ಥಳಗಳು » ಖಜುರಾಹೊ » ಆಕರ್ಷಣೆಗಳು » ಘಂಟೈ ದೇವಾಲಯ

ಘಂಟೈ ದೇವಾಲಯ, ಖಜುರಾಹೊ

1

ಘಂಟೈ ದೇವಾಲಯವು ಪೂರ್ವ ದೇಗುಲಗಳಿಗೆ ಸೇರಿದ ಒಂದು ಜೈನ ದೇವಾಲಯವಾಗಿದೆ. ಸ್ಥಳೀಯ ಭಾಷೆಯಲ್ಲಿ ಘಂಟೈ ಎಂದರೆ ಘಂಟೆ ಎಂದರ್ಥ. ಈ ದೇವಾಲಯದಲ್ಲಿರುವ ಸ್ತಂಭಗಳಲ್ಲಿ ಘಂಟೆಯ ಕೆತ್ತನೆಗಳನ್ನು ಮಾಡಿರುವುದರಿಂದ ಇದಕ್ಕೆ ಈ ಹೆಸರು ಬರಲು ಕಾರಣವಾಗಿದೆ. ಈ ದೇವಾಲಯವನ್ನು ಕ್ರಿ.ಶ. 950 ರಿಂದ 1050ರ ಒಳಗೆ ನಿರ್ಮಾಣ ಮಾಡಿದರೆಂದು ತಿಳಿದುಬಂದಿದೆ.

ಈ ದೇವಾಲಯದ ಮಾಡಿನ ಕೆಳಗೆ ಇರುವ ಸಾಲಿನಲ್ಲಿ ಮಹಾವೀರರ ತಾಯಿಗೆ ಬಂದಿದ್ದ 16 ಕನಸುಗಳನ್ನು ತುಂಬಾ ಸೊಗಸಾಗಿ ಕೆತ್ತಿದ್ದಾರೆ. ಇದರ ಜೊತೆಗೆ ಈ ದೇವಾಲಯದಲ್ಲಿ ಗರುಡನ ಮೇಲೆ ಸವಾರಿ ಮಾಡುತ್ತಿರುವ ಆಯುಧಪಾಣಿಯಾದ ಜೈನ ದೇವೆರನ್ನು ಸಹ ನಾವು ನೋಡಬಹುದು. ಪೂರ್ವ ದಿಕ್ಕಿಗೆ ಮುಖ ಮಾಡಿಕೊಂಡು ನಿಂತಿರುವ ಈ ದೇವಾಲಯದಲ್ಲಿ ಸುಂದರವಾದ ಕೆತ್ತನೆಗಳನ್ನು ನಾವು ನೋಡಬಹುದು.

ಜೈನ ಧರ್ಮದ ಅನುಯಾಯಿಗಳು ಮಹಾವೀರನನ್ನು ತಮ್ಮ ಕೊನೆಯ ತೀರ್ಥಂಕರನೆಂದು ಅಥವಾ ಭುವಿಯಿಂದ ಸ್ವರ್ಗಕ್ಕೆ ಹೋದ ಸ್ವತಂತ್ರ ಆಧ್ಯಾತ್ಮಿಕ ಆತ್ಮವೆಂದು ಪರಿಗಣಿಸಿದ್ದಾರೆ. ಈ ದೇವಾಲಯವು ಪಾರ್ಶ್ವನಾಥ್ ದೇವಾಲಯವನ್ನು ಹೋಲುತ್ತದೆಯಾದರೂ, ಗಾತ್ರದಲ್ಲಿ ಅದಕ್ಕಿಂತ ದೊಡ್ಡದಾಗಿದೆ. ಈ ಸುಂದರವಾದ ಜೈನ ದೇವಾಲಯದ ಸುತ್ತ- ಮುತ್ತ ಇನ್ನಿತರ ಜೈನ ದೇವಾಲಯಗಳನ್ನು ನಾವು ಕಾಣಬಹುದು.

One Way
Return
From (Departure City)
To (Destination City)
Depart On
28 Mar,Thu
Return On
29 Mar,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
28 Mar,Thu
Check Out
29 Mar,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
28 Mar,Thu
Return On
29 Mar,Fri