Search
  • Follow NativePlanet
Share
ಮುಖಪುಟ » ಸ್ಥಳಗಳು » ಕೀಲಾಂಗ್ » ಆಕರ್ಷಣೆಗಳು » ಕರ್ದಂಗ್ ಮಠ

ಕರ್ದಂಗ್ ಮಠ, ಕೀಲಾಂಗ್

3

ಕರ್ದಂಗ್ ಮಠ ಹಿಮಾಚಲ ಪ್ರದೇಶದ ಕೀಲಾಂಗ್ ನಿಂದ ಸುಮಾರು 5 ಕಿಮೀ ದೂರದಲ್ಲಿರುವ ಪುರಾತನ ಗೊಂಪಾ(ಬೌದ್ಧಿಯರ ಮಠ). ಸಮುದ್ರ ಮಟ್ಟದಿಂದ 3500 ಮೀಟರ್ ಎತ್ತರದಲ್ಲಿ ನಿಂತಿರುವ ಗೊಂಪಾ ಭಗ ನದಿ ತೀರದಲ್ಲಿದೆ. ಇದು ಬೌದ್ಧಧರ್ಮದ ದೃಕ್ಪ ಕಗ್ಯೂಡ್ ಶಾಲೆಯ ಅಡಿಯಲ್ಲಿ ಬರುವ ಇದು 900 ವರ್ಷ ಹಳೆಯ ಮಠವಾಗಿದೆ. 12 ನೇ ಶತಮಾನದಲ್ಲಿ ನಿರ್ಮಾಣಗೊಂಡ ಈ ಮಠದಲ್ಲಿ ದೇಶದಲ್ಲಿ ದೊಡ್ಡ ಬೌದ್ಧ ಗ್ರಂಥಾಲಯ ಎಂದು ಹೇಳಲಾದ ಹಳೆಯ ಗ್ರಂಥಾಲಯವಿದೆ. ಈ ಗ್ರಂಥಾಲಯವು ಭೊತಿಕಾ ಅಥವಾ ಶೆರ್ಪಾ ಭಾಷೆಯಲ್ಲಿ ಬರೆದ ಕಂಗ್ಯೂರ್ ಮತ್ತು ತಂಗ್ಯೂರ್ ಗ್ರಂಥಗಳನ್ನು ಹೊಂದಿದೆ. ಈ ಮಠದಲ್ಲಿ  ವರ್ಣಚಿತ್ರಗಳು, ಲೂಟ್ಸ್, ಡ್ರಮ್ಸ್, ಹಾರ್ನ್ಸ್, ಮೊದಲಾದ ಸಂಗೀತ ವಾದ್ಯಗಳು ಮತ್ತು ಕೆಲವು ಹಳೆಯ ಶಸ್ತ್ರಾಸ್ತ್ರಗಳ ವಿಶಾಲ ಸಂಗ್ರಹವನ್ನು ಕಾಣಬಹುದು. ಈ ಬೌದ್ಧ ಗೊಂಪಾ ಲಾಮಾ ನೊರ್ಬು ರಿನ್ಪೊಚೆ ಅವರಿಂದ 1912 ರಲ್ಲಿ ನವೀಕರಣಗೊಂಡಿತು.

ಲಾಮಾ ನೊರ್ಬು ಅಸ್ಥಿಗಳನ್ನು(ಬೂಧಿ ಮತ್ತು ತಲೆಬುರುಡೆ) ಗೊಂಪಾ ದ ಮೊದಲ ಕೋಣೆಯಲ್ಲಿ ಸಂರಕ್ಷಿಸಿಡಲಾಗಿದೆ. ಪದ್ಮ ಸಂಭವ ಮತ್ತು ತಾರಾ ದೇವಿ ಮೂರ್ತಿಗಳನ್ನು ಸಹ ಇಲ್ಲಿ ಕಾಣಬಹುದು. ಎರಡನೇ ಕೊಠಡಿಯಲ್ಲಿರುವ ಪ್ರಾರ್ಥನಾ ಸಭಾಂಗಣ ಅವಲೋಕಿತೇಶ್ವರ ನ ಹನ್ನೊಂದು ತಲೆಯ ವಿಗ್ರಹವನ್ನು ಒಳಗೊಂಡಿದೆ. ಮೂರನೇ ಕೋಣೆಯಲ್ಲಿ ಹಿತ್ತಾಳೆಯ ಬೆಲ್ ಹೊಂದಿರುವ 6 ಅಡಿ ಎತ್ತರದ ಮರದ ಪ್ರಾರ್ಥನಾ ಚಕ್ರ ಇದೆ. ಇಲ್ಲಿನ ಮಠದಲ್ಲಿ ಸನ್ಯಾಸಿಗಳು ಮತ್ತು ಸನ್ಯಾಸಿನಿಯರಿಗೆ ಬದುಕುವ ಸಮಾನ ಹಕ್ಕುಗಳನ್ನು ಒದಗಿಸಲಾಗಿದ್ದು ಮತ್ತು ಅವರಿಗೆ ಕುಟುಂಬ ಜೀವನಕ್ಕೂ ಅವಕಾಶವಿರುತ್ತದೆ. ಸನ್ಯಾಸಿಗಳು ತಮ್ಮ ಕುಟುಂಬಗಳೊಂದಿಗೆ ಬೇಸಿಗೆ ಕಾಲವನ್ನ ಇಲ್ಲಿ ಕಳೆದು ಚಳಿಗಾಲದಲ್ಲಿ ಹಿಂತಿರುಗಿ ಹೋಗುತ್ತಾರೆ. ದೊಡ್ಡ ಗಾತ್ರದ ಪ್ರಾರ್ಥನಾ ಡ್ರಮ್ ಮಠದಲ್ಲಿದ್ದು ಇಲ್ಲಿ ಕಾಗದದ ಮೇಲೆ ದಶಲಕ್ಷ ಸಲ ಬರೆದ ಪವಿತ್ರ ಆರು ಅಕ್ಷರದ ಮಂತ್ರ 'ಓಂ ಮಣಿ ಪಡ್ಮೆ/ಪದ್ಮೆ ಹಮ್', ಹೊಂದಿರುವುದನ್ನು ಕಾಣಬಹುದು.

One Way
Return
From (Departure City)
To (Destination City)
Depart On
23 Apr,Tue
Return On
24 Apr,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
23 Apr,Tue
Check Out
24 Apr,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
23 Apr,Tue
Return On
24 Apr,Wed