Search
  • Follow NativePlanet
Share
ಮುಖಪುಟ » ಸ್ಥಳಗಳು» ಕೀಳ್ಪೆರುಂಪಳ್ಳಂ

ಕೀಳ್ಪೆರುಂಪಳ್ಳಂ - ನವಗ್ರಹಗಳಲ್ಲೊಂದಾದ ಕೇತುವಿನ ದೇವಸ್ಥಾನ

6

ದಕ್ಷಿಣ ಭಾರತದ ತಮಿಳುನಾಡಿನ ಚಿದಂಬರಂ ಜಿಲ್ಲೆಯ ಒಂದು ಸಣ್ಣ ಸುಂದರ ಪ್ರದೇಶ ಕೀಳ್ಪೆರುಂಪಳ್ಳಂ. ಇದು ಕೀಳ್ಪೆರುಂಪಳ್ಳಂ(ಕೇತು) ಎಂಬ ದೇವಸ್ಥಾನದಿಂದ ಪ್ರಸಿದ್ಧವಾಗಿದೆ.

ಈ ಹಳ್ಳಿಯು ಭಾರತದ ಸಂಸ್ಕೃತಿಯನ್ನು ನೋಡಲು ಬಯಸುವ ವಿದೇಶಿ ಪ್ರವಾಸಿಗರ ನಡುವೆ ಪ್ರಸಿದ್ಧಿ ಪಡೆದಿದೆ. ಪ್ರವಾಸಿಗರು ಈ ಹಳ್ಳಿಯಲ್ಲಿ ದೀರ್ಘಕಾಲದವರೆಗೆ ನೆಲೆಸಿ ಇಲ್ಲಿನ ಹಳ್ಳಿಗರ ಜೀವನದ ದೈನಂದಿನ ಕಾರ್ಯಶೈಲಿ, ಹಾಲು ಕರೆಯುವುದು, ವ್ಯವಸಾಯ ಮುಂತಾದವುಗಳನ್ನು ಹತ್ತಿರದಿಂದ ವೀಕ್ಷಿಸುತ್ತಾ ಅವುಗಳಲ್ಲಿ ಪಾಲ್ಗೊಳ್ಳಲು ಇಷ್ಟಪಡುತ್ತಾರೆ. 

ಕೀಳ್ಪೆರುಪಳ್ಳಂನ ಸುತ್ತಮುತ್ತಲ ಪ್ರವಾಸಿ ಸ್ಥಳಗಳು

ಈ ಹಳ್ಳಿಯ ಮುಖ್ಯ ಆಕರ್ಷಣೆ ಕೇತುವಿನ ದೇವಸ್ಥಾನ. ಜನ ತಮ್ಮ ಮೇಲುಂಟಾದ ಕೇತುವಿನ ಪ್ರಭಾವದಿಂದ ಮುಕ್ತಗೊಳ್ಳಲು ಈ ದೇವಾಲಯದಲ್ಲಿ ಪೂಜೆ ಸಲ್ಲಿಸುತ್ತಾರೆ.

ಇಲ್ಲಿನ ಮತ್ತೊಂದು ಆಕರ್ಷಣೆಯೆಂದರೆ ಈ ಹಳ್ಳಿಯ ಸಮೀಪದಲ್ಲಿರುವ ಪೂಂಪುಗಾರ್ ಸಮುದ್ರ ತೀರ. ಇದು ಸ್ಥಳೀಯರಿಗೆ ಪ್ರವಾಸಿಗರಿಗೆ ಅತ್ಯಂತ ಪ್ರಿಯವಾದ ಪ್ರವಾಸ ತಾಣ. 

ಕೀಳ್ಪೆರುಪಳ್ಳಂನ ಸುತ್ತಮುತ್ತಲಿರುವ ನವಗ್ರಹ ದೇವಸ್ಥಾನಗಳು

9 ನವಗ್ರಹ ದೇವಸ್ಥಾನಗಳಲ್ಲಿ ಕೀಳ್ಪೆರುಪಂಳ್ಳಂ ದೇವಸ್ಥಾನ ಕೂಡ ಒಂದು. ಉಳಿದ 8 ದೇವಸ್ಥಾನಗಳು ಈ ಹಳ್ಳಿಯ ಸನಿಹದಲ್ಲಿವೆ. ತಿರುನಲ್ಲೂರು(ಶನಿ), ಕಂಜನೂರು(ಶುಕ್ರ), ಸೂರ್ಯನಾರ್ ಕೊಯಿಲ್ (ಸೂರ್ಯ), ತಿರುವೆಂಕಾಡು (ಬುಧ), ತಿಂಗಳೂರ್(ಚಂದ್ರ), ಅಲಂಗುಡಿ (ಗುರು), ವೈದೇಶ್ವರನ್ ಕೊಯಿಲ್ (ಕುಜ), ತಿರುನಾಗೇಶ್ವರಂ(ರಾಹು). ಈ ಹಳ್ಳಿಯಿಂದ  ಇಲ್ಲಿಗೆ ಸುಲಭವಾಗಿ ತಲುಪಬಹುದು.

ತಲುಪುವುದು ಹೇಗೆ ಮತ್ತು ಹವಾಮಾನ

ಕೀಳ್ಪೆರುಪಂಳ್ಳಂನ ಸನಿಹದಲ್ಲಿ ಯಾವುದೇ ವಿಮಾನ ನಿಲ್ದಾಣ ಅಥವ ರೈಲು ನಿಲ್ದಾಣಗಳಿಲ್ಲ. ಆದರೆ ಸರ್ಕಾರವು ಉತ್ತಮ ರಸ್ತೆಗಳನ್ನು ನಿರ್ಮಿಸಿದ್ದು ಈ ಹಳ್ಳಿಯನ್ನು ರಸ್ತೆ ಮಾರ್ಗವಾಗಿ ಸುಲಭವಾಗಿ ತಲುಪಬಹುದಾಗಿದೆ. ರಾಜ್ಯ ಸರ್ಕಾರವು ಇಲ್ಲಿಗೆ ಬಸ್ ಸೌರ್ಕರ್ಯವನ್ನು ಕಲ್ಪಿಸಿದೆ. ಆದರೆ ಇಲ್ಲಗೆ ಡಿಲಕ್ಸ್ ಅಥವ ಎಸಿ ಬಸ್ಸುಗಳ ಸೌಕರ್ಯವಿಲ್ಲ. ಪ್ರವಾಸಿಗರು ಇಲ್ಲಿಗೆ ಸಾಮಾನ್ಯವಾಗಿ ಚಳಿಗಾಲದಲ್ಲಿ ಬರುತ್ತಾರೆ. ಏಕೆಂದರೆ ಈ ಸಮಯದಲ್ಲಿ ಇಲ್ಲಿ ಉಷ್ಣತೆಯು ಕಡಿಮೆಯಿದ್ದು ವಾತಾವರಣವು ಆಹ್ಲಾದಕರವಾಗಿರುತ್ತದೆ.

ಕೀಳ್ಪೆರುಂಪಳ್ಳಂ ಪ್ರಸಿದ್ಧವಾಗಿದೆ

ಕೀಳ್ಪೆರುಂಪಳ್ಳಂ ಹವಾಮಾನ

ಉತ್ತಮ ಸಮಯ ಕೀಳ್ಪೆರುಂಪಳ್ಳಂ

  • Jan
  • Feb
  • Mar
  • Apr
  • May
  • Jun
  • July
  • Aug
  • Sep
  • Oct
  • Nov
  • Dec

ತಲುಪುವ ಬಗೆ ಕೀಳ್ಪೆರುಂಪಳ್ಳಂ

  • ರಸ್ತೆಯ ಮೂಲಕ
    ಇಲ್ಲಿಗೆ ಉತ್ತಮ ರಸ್ತೆ ಸೌಕರ್ಯವಿದೆ. ಕುಂಬಕೋಣಂನಿಂದ ನಿಯಮಿತವಾಗಿ ಇಲ್ಲಿಗೆ ಬಸ್ ಸಂಚಾರವಿದೆ. ಕುಂಬಕೋಣಂನಿಂದ ಇಲ್ಲಿಗೆ ತಲುಪಲು 3 ಘಂಟೆ ಬೇಕು. ಬಸ್ ದರಗಳು ಕೂಡ ದುಬಾರಿಯಲ್ಲ.
    ಮಾರ್ಗಗಳ ಹುಡುಕಾಟ
  • ರೈಲಿನ ಮೂಲಕ
    ಇಲ್ಲಿಗೆ ಸಮೀಪದ ರೈಲು ನಿಲ್ದಾಣವೆಂದರೆ 147 ಕಿಮೀ ಅಂತರದಲ್ಲಿರುವ ಕುಂಬಕೋಣಂ ರೈಲು ನಿಲ್ದಾಣ. ಈ ನಿಲ್ದಾಣದಿಂದ ಚೆನೈ, ರಾಮೇಶ್ವರಂ, ಮದುರೈ, ತಿರುಪತಿ ಮತ್ತು ಕ್ವಿಲೋನ್ಗಳಿಗೆ ರೈಲ್ವೇ ಸೌಲಭ್ಯವಿದೆ. ರೈಲ್ವೇ ನಿಲ್ದಾಣದಿಂದ ಬಸ್ ಅಥವ ಟ್ಯಾಕ್ಸಿಯ ಮೂಲಕ ಕೀಳ್ಪೆರುಂಪಳ್ಳಂ ತಲುಪಬಹುದು.
    ಮಾರ್ಗಗಳ ಹುಡುಕಾಟ
  • ಆಕಾಶದ ಮೂಲಕ
    ಕೀಳ್ಪೆರುಂಪಳ್ಳಂಗೆ ಹತ್ತಿರದಲ್ಲಿ ಯಾವುದೇ ವಿಮಾನನಿಲ್ದಾಣವಿಲ್ಲ. ತಿರುಚ್ಚಿಯ ವಿಮಾನ ನಿಲ್ದಾಣ ಇಲ್ಲಿಂದ 243 ಕಿಮೀ ದೂರದಲ್ಲಿದೆ. ತಿರುಚ್ಚಿಯಲ್ಲಿ ಅಂತರ-ರಾಷ್ಟ್ರೀಯ ವಿಮಾನ ನಿಲ್ದಾಣವಿಲ್ಲ. ಆದರೆ ಇಲ್ಲಿಂದ ಚೆನೈಗೆ ವಿಮಾನ ಸೌಲಭ್ಯವಿದೆ. ಅಲ್ಲಿ ಅಂತರ-ರಾಷ್ಟ್ರೀಯ ವಿಮಾನ ನಿಲ್ದಾಣವಿದೆ. ತಿರುಚ್ಚಿಯಿಂದ ಟ್ಯಾಕ್ಸಿಯ ಮೂಲಕ ಈ ಹಳ್ಳಿಯನ್ನು ತಲುಪಬಹುದು.
    ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
29 Mar,Fri
Return On
30 Mar,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
29 Mar,Fri
Check Out
30 Mar,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
29 Mar,Fri
Return On
30 Mar,Sat