ಕೇದಾರನಾಥದಿಂದ 19 ಕಿ.ಮೀ. ದೂರದಲ್ಲಿರುವ ಸೋನ್ ಪ್ರಯಾಗವು ಸಮುದ್ರ ಮಟ್ಟದಿಂದ 1821 ಮೀಟರ್ ಎತ್ತರದಲ್ಲಿ ನೆಲೆಸಿದೆ. ವಾಸುಕಿ ಹಾಗೂ ಮಂದಾಕಿನಿ ನದಿಗಳು ಸಂಧಿಸುವ ಸ್ಥಳ ಇದಾಗಿದೆ. ಅತ್ಯಂತ ಪ್ರಮುಖ ಧಾರ್ಮಿಕ ನಂಬಿಕೆ ಒಳಗೊಂಡಿರುವ ಈ ತಾಣ ಕೇದಾರನಾಥ ತೆರಳುವ ಮಾರ್ಗದಲ್ಲಿಯೇ ಸಿಗುತ್ತದೆ. ಇಲ್ಲಿನ ನದಿಯ ಪವಿತ್ರ ನೀರು ಅತ್ಯಂತ ಮಹತ್ವದ ಪಾತ್ರ ನಿರ್ವಹಿಸುತ್ತದೆ. ನಂಬಿಕೆಗಳ ಪ್ರಕಾರ, ಸೋನ್ ಪ್ರಯಾಗದಲ್ಲಿರುವ ನೀರನ್ನು ಸ್ಪರ್ಷಿಸಿದರೆ ಅವರಿಗೆ ವೈಕುಂಠ ಧಾಮ ಪ್ರಾಪ್ತಿಯಾಗುತ್ತದೆಯಂತೆ.