Search
  • Follow NativePlanet
Share
ಮುಖಪುಟ » ಸ್ಥಳಗಳು » ಕೇದಾರನಾಥ » ಆಕರ್ಷಣೆಗಳು » ಶಂಕರಾಚಾರ್ಯರ ಸಮಾಧಿ

ಶಂಕರಾಚಾರ್ಯರ ಸಮಾಧಿ, ಕೇದಾರನಾಥ

2

ಕೇದಾರನಾಥ ದೇವಾಲಯಕ್ಕೆ ಹತ್ತಿರದಲ್ಲೆ ಆದಿ ಶಂಕರರ ಸಮಾಧಿ ಕೂಡ ಇದೆ. ಇವರು ಜನಪ್ರಿಯ ಹಿಂದು ಧಾರ್ಮಿಕ ಸನ್ಯಾಸಿ. ಅದ್ವೈತ ವೇದಾಂತವನ್ನು ಸಾರುತ್ತಾ ಸಾಗಿದವರು ಇವರು. ಅಲ್ಲದೇ 8ನೇ ಶತಮಾನದಲ್ಲಿ ಕೇದಾರನಾಥ ದೇವಾಲಯವನ್ನು ಸ್ಥಾಪಿಸಿ ಅದನ್ನು ನಿರ್ವಹಿಸಿದರು ಎಂದು ನಂಬಲಾಗುತ್ತದೆ.

ಅಲ್ಲದೆ, ದೇಶದ ನಾಲ್ಕೂ ಜಗತ್ಪೀಠಗಳನ್ನು ಇವರು ಜನಪ್ರಿಯಗೊಳಿಸಿದರು. ಪುರಾಣಗಳ ಪ್ರಕಾರ, ಇವರು ಬದ್ರಿನಾಥ್‌ದ ಜ್ಯೋತಿರ್ಮಠ ಆಶ್ರಮದಿಂದ ಹೊರಟು ಕೇದಾರನಾಥ ಬೆಟ್ಟವನ್ನು ಸುತ್ತಿದರು. ಅಂತಿಮವಾಗಿ ಈಗ ದೇವಾಲಯ ಇರುವ ಸ್ಥಳವನ್ನು ತಲುಪಿದರು. ಇವರನ್ನು ಅತಿಯಾಗಿ ಇಷ್ಟಪಡುವ ನಾಲ್ಕು ವ್ಯಕ್ತಿಗಳು ಇವರೊಂದಿಗೆ ತೆರಳಿದ್ದರು. ಆದರೆ ಮಧ್ಯದಲ್ಲಿಯೇ ಅವರೆಲ್ಲರು ಶಂಕರರನ್ನು ತೊರೆದು ಹಿಂತಿರುಗಿದರು. ಕೊನೆಯನ್ನು ತಲುಪಿದ್ದು ಶಂಕರಾಚಾರ್ಯರು ಒಬ್ಬರೆ.

ಈ ಭಾಗದಲ್ಲಿ ಪ್ರವಾಸಿಗರು ತೆರಳುವಾಗ ಬಿಸಿನೀರ ಬುಗ್ಗೆಯನ್ನು ಕಾಣಬಹುದು. ಇದನ್ನು ಕೂಡ ಶಂಕರಾಚಾರ್ಯರೇ ನಿರ್ಮಿಸಿದ್ದಾರೆ ಎಂದು ನಂಬಲಾಗುತ್ತದೆ. ಈ ಮಾರ್ಗವಾಗಿ ತೆರಳುವಾಗ ಅವರ ಸಂಗಡಿಗರು ಇಲ್ಲಿನ ವ್ಯತಿರಿಕ್ತ ವಾತಾವರಣದಿಂದ ಬಾಧಿತರಾಗಿ ನೋವನ್ನು ಅನುಭವಿಸಿದರು. ಅವರಿಗಾಗಿ ಈ ಬಿಸಿನೀರ ಬುಗ್ಗೆ ರಚಿಸಿದರು ಎನ್ನಲಾಗುತ್ತದೆ. ಇನ್ನೊಂದು ಮಾಹಿತಿ ಪ್ರಕಾರ, ಶಂಕರಾಚಾರ್ಯರು ನಾಲ್ಕು ಪೀಠಗಳನ್ನು(ಚಾರ್ ಧಾಮ್) ಸ್ಥಾಪಿಸಿದ ತರುವಾಯ ತಮ್ಮ 32ನೇ ವಯಸ್ಸಿನಲ್ಲಿ ಇದೇ ಸ್ಥಳದಲ್ಲಿ ದೇಹವನ್ನು ತ್ಯಜಿಸಿದರು.

One Way
Return
From (Departure City)
To (Destination City)
Depart On
24 Apr,Wed
Return On
25 Apr,Thu
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
24 Apr,Wed
Check Out
25 Apr,Thu
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
24 Apr,Wed
Return On
25 Apr,Thu