ಡಿಯೊಟಲವು ಮಘ್ನವ್ ಡೌಲ್ನ ವಿಗ್ರಹವನ್ನು ಪ್ರಸ್ತುತ ಪ್ರತಿಷ್ಟಾಪಿಸಲ್ಪಟ್ಟಿರುವ ಸ್ಥಳವಾಗಿದೆ. ಮಾನ್ರ ದಾಳಿಯ ಸಂದರ್ಭದಲ್ಲಿ ಪುರಾತನವಾದ ಮಘ್ನವ್ ಡೌಲ್ನ ವಿಗ್ರಹವನ್ನು ಭದ್ರತೆಯ ದೃಷ್ಟಿಯಿಂದ ಇಲ್ಲಿ ಅವಿತಿಡಲಾಯಿತು. ನಂತರ ಖೆರಜ್ಖಾಟ್ನ ಗವೊರು ಬೀಲ್ನಿಂದ ಹೊರತೆಗೆದರು.
ಗವೊರು ಬೀಲ್ನಿಂದ ಹೊರತೆಗೆದ ನಂತರ ಇದನ್ನು ಡಿಯೊಟಲದಲ್ಲಿ ಪ್ರತಿಷ್ಟಾಪಿಸಲಾಯಿತು. ಆಗ ಇದನ್ನು ಬೊರ್-ಕಲೈಕ ಥಾನ್ ಎಂದು ಕರೆಯುತ್ತಿದ್ದರು. ಡಿಯೊಟಲ ಎಂಬುದು "ಡಿಯೊ"- ಅಂದರೆ ದೇವರು ಮತ್ತು "ಟೊಲ"- ಎಂದರೆ ಹೊರತೆಗೆಯಲ್ಪಟ್ಟಿದ್ದು ಎಂಬ ಎರಡು ಪದಗಳಿಂದ ಉಂಟಾದ ನಾಮವಾಗಿದೆ. ಡಿಯೊಟಲವು ಲಕ್ಷ್ಮೀಪುರ್ ಜಿಲ್ಲೆಯಲ್ಲಿರುವ ನಾರಾಯಣಪುರದಿಂದ 8 ಕಿ.ಮೀ ದೂರದಲ್ಲಿ ನೆಲೆಗೊಂಡಿದೆ. ಇದು ಕಾಜಿರಂಗಾ ರಾಷ್ಟ್ರೀಯ ಉದ್ಯಾನವನದಿಂದ 34 ಕಿ.ಮೀ ದೂರದಲ್ಲಿ ನೆಲೆಗೊಂಡಿದೆ. ಈ ಸ್ಥಳವು ವಾಸ್ತುಶಿಲ್ಪದ ದೃಷ್ಟಿಯಿಂದ ಅದ್ಭುತವೆನ್ನುವ ಯಾವುದೇ ಅಂಶವನ್ನು ಹೊಂದಿಲ್ಲ. ಆದರೂ ಇದು ತನ್ನದೇ ಆದ ರೀತಿಯಲ್ಲಿ ಸುಂದರವಾಗಿ ರೂಪುಗೊಂಡಿದೆ.
ಭಕ್ತಾಧಿಗಳು ಮಘ್ನವ್ ಡೌಲ್ಗೆ ಹೋದ ನಂತರ ಡಿಯೊಟಲಗೆ ಆಗಮಿಸುತ್ತಾರೆ. ಏಕೆಂದರೆ ಅಲ್ಲಿ ಅವರು ವಿಗ್ರಹವನ್ನು ನೋಡದೆ ತಮ್ಮ ಯಾತ್ರೆಯನ್ನು ಅಪೂರ್ಣಗೊಳಿಸಿರುತ್ತಾರೆ ಹಾಗಾಗಿ. ಇದು ಕಾಜಿರಂಗಾ ರಾಷ್ಟ್ರೀಯ ಉದ್ಯಾನವನಕ್ಕೆ ಸಮೀಪದಲ್ಲಿ ನೆಲೆಗೊಂಡಿದೆ.