ಕೌಸಾನಿಯಲ್ಲಿ ಅತ್ಯಂತ ಪ್ರಸಿದ್ಧ ಚಾರಣ ಮಾಡುವ ಚಟುವಟಿಕೆಯನ್ನು ಪ್ರವಾಸಿಗರು ಆನಂದಿಸಬಹುದು. ಹಿಮಾಲಯನ್ ನಗರ ಕೌಸಾನಿ ಇಂತಹ ಸಾಹಸಮಯ ಚಟುವಟಿಕೆಗಳಿಗೆ ಹೆಸರುವಾಸಿಯಾಗಿದ್ದು, ಕೌಸಾನಿ ಮತ್ತು ಆದಿ-ಕೈಲಾಸ/ಶ ದ ನಡುವೆ ಧರ್ಚುಲಾ ಮೂಲಕ ಸಾಗುವ ಚಾರಣ ಮಾರ್ಗವು ಅತ್ಯಂತ ಸುಂದರವಾದ ನೋಟವನ್ನು ಒದಗಿಸುತ್ತದೆ. ಆದಿ ಕೈಲಾಶ್, ಛೋಟಾ ಕೈಲಾಶ್ ಎಂದೂ ಪ್ರಸಿದ್ಧಿಪಡೆದಿದ್ದು ಇಲ್ಲಿ ಹಿಮ ಪರ್ವತ 'ಓಂ' ಪವಿತ್ರ ಪದದ ಗುರುತನ್ನು ರೂಪಿಸುತ್ತದೆ. ಇತರ ಜನಪ್ರಿಯ ಚಾರಣ ಮಾರ್ಗಗಳು ಕೌಸಾನಿ ಮತ್ತು ಸುಂದೇರ್ ಗಂಧ, ಹಾಗೆಯೇ ಕೌಸಾನಿ ಮತ್ತು ಛೋಟಾ ಪಿನ್ನಥ್ ಮೂಲಕ ಬಾರಾ ಪಿನ್ನಥ್ ನಡುವೆ ಸೇರುವ ಮಾರ್ಗಗಳು ಪ್ರಸಿದ್ಧವಾಗಿವೆ.