ಬೈಜ್ನಾಥ್ ದೇವಾಲಯ ಕೌಸಾನಿ ಪ್ರದೇಶದಿಂದ ನಿಂದ 16 ಕಿ. ಮೀ ದೂರದಲ್ಲಿರುವ, ಬೈಜ್ನಾಥ್ ಪಟ್ಟಣದಲ್ಲಿರುವ ಒಂದು ಪ್ರಖ್ಯಾತ ಧಾರ್ಮಿಕ ಸ್ಥಳವಾಗಿದೆ. 12 ನೇ ಶತಮಾನದಲ್ಲಿ ನಿರ್ಮಿಸಲಾದ ಈ ದೇವಸ್ಥಾನ ಹಿಂದೂಗಳ ನಡುವೆ ದೊಡ್ಡ ಧಾರ್ಮಿಕ ಮತ್ತು ಐತಿಹಾಸಿಕ ಮಹತ್ವ ಹೊಂದಿದೆ. ಒಂದು ದಂತಕಥೆಯ ಪ್ರಕಾರ, ಹಿಂದೂ ದೇವತೆಗಳಾದ ಶಿವ ಮತ್ತು ಪಾರ್ವತಿ ಗೋಮ್ತಿ ನದಿ ಮತ್ತು ಗರೂರ್ ಗಂಗಾ ಸಂಗಮಸ್ಥಾನದಲ್ಲಿ ವಿವಾಹವಾದರು. ಹಿಂದೆ ಕಾರ್ತಿಕ್ಯಪುರ ಎಂದು ಕರೆಯಲ್ಪಡುತ್ತಿದ್ದ ಬೈಜ್ನಾಥ್ ಪಟ್ಟಣ, 12 ನೇ ಮತ್ತು 13 ನೇ ಶತಮಾನದಲ್ಲಿ ಕತ್ಯೂರಿ ರಾಜವಂಶದ ರಾಜಧಾನಿಯಾಗಿತ್ತು.