ಗುರುದ್ವಾರ ಸಿಂಗ್ ಸಭಾ ಸಿಖ್ಖರ ಧಾರ್ಮಿಕ ಕೇಂದ್ರವಾಗಿದ್ದು, ಕತುವಾ ನಗರದ ಮಧ್ಯದಲ್ಲಿದೆ. ಈ ಪ್ರದೇಶ ಗುರುದ್ವಾರ ಚೌಕ ಎಂದೇ ಪ್ರಸಿದ್ಧಿ ಪಡೆದಿದ್ದು, ಗುರುದ್ವಾರ ಪ್ರಬಂಧಕ ಸಮಿತಿಯೊಂದನ್ನು ಇದರ ಒಳಭಾಗದಲ್ಲಿ ಕಾಣಬಹುದಾಗಿದೆ. ಗುರುದ್ವಾರದ ಮಧ್ಯದಲ್ಲಿ ಸಿಖ್ ಮಿಷನರಿ ಕಾಲೇಜ್ ಕೂಡ ಇದೆ. ಸಿಖ್ಖರ ಹಬ್ಬಗಳಾದ ಗುರುಪೂರ್ಬ್ ಮತ್ತು ಪ್ರಕಾಶ್ ಉತ್ಸವಗಳನ್ನು ಇಲ್ಲಿ ಭರ್ಜರಿಯಾಗಿ ಆಚರಿಸಲಾಗುತ್ತದೆ. ನಗರ ಕೀರ್ತನ್ ಮತ್ತು ಕಾರ್ ಉತ್ಸವಗಳು ಇಲ್ಲಿನ ಮತ್ತೊಂದು ಆಕರ್ಷಣೆ.