Search
  • Follow NativePlanet
Share
ಮುಖಪುಟ » ಸ್ಥಳಗಳು » ಕಸೌಲಿ » ಹವಾಮಾನ

ಕಸೌಲಿ ಹವಾಮಾನ

ಕಸೌಲಿಯಂತಹ ಸುಂದರವಾದ ಹಾಗೂ ಪ್ರಾಕೃತಿಕ ಸೌಂದರ್ಯವನ್ನು ಹೊಂದಿರುವ ಪ್ರದೇಶಕ್ಕೆ ಪ್ರವಾಸಿಗರು ವರ್ಷದ ಯಾವುದೇ ಕಾಲದಲ್ಲಿ ಬೇಕಾದರೂ ಭೇಟಿ ನೀಡಬಹುದು. ಫೆಬ್ರವರಿ ತಿಂಗಳ ಚಳಿಗಾಲದಲ್ಲಿ ನಡೆಯುವ ಜಾತ್ರೆಗಳು ಇಲ್ಲಿ ಬಹಳ ಜನಪ್ರಿಯವಾದವು ಈ ಕಾಲದಲ್ಲಿ ಇದೊಂದು ಪ್ರಮುಖವಾದ ಆಕರ್ಷಣೆಯೂ ಆಗಿದೆ.

ಬೇಸಿಗೆಗಾಲ

(ಮಾರ್ಚ್ ನಿಂದ ಜೂನ್): ಕಸೌಲಿಯಲ್ಲಿ ಬೇಸಿಗೆ ಕಾಲವು ಮಾರ್ಚ್ ತಿಂಗಳಲ್ಲಿ ಆರಂಭವಾಗಿ ಜೂನ್ ವರೆಗೂ ಇರುತ್ತದೆ. ಈ ಸಮಯದಲ್ಲಿ ತಾಪಮಾನ ಬೆಳಗ್ಗೆಯಲ್ಲಿ 28 ಡಿಗ್ರಿ ಹಾಗೂ ರಾತ್ರಿಯಲ್ಲಿ 14 ಡಿಗ್ರಿ ಸೆಲ್ಶಿಯಸ್ ಇರುತ್ತದೆ. ಬೇಸಿಗೆಯಲ್ಲಿ ಕಸೌಲಿ ಪ್ರದೇಶದಲ್ಲಿ ಬೆಳಿಗ್ಗೆ ಬೆಚ್ಚನೆಯ ಹಾಗೂ ರಾತ್ರಿ ತಂಪಾದ ಹವಾಮಾನ ಇರುತ್ತದೆ.

ಮಳೆಗಾಲ

(ಜುಲೈ ನಿಂದ ಆಗಸ್ಟ್): ಜುಲೈನಿಂದ ಆರಂಭವಾಗುವ ಮಳೆಗಾಲ ಸತತವಾಗಿ ಆಗಸ್ಟ್ ವರೆಗೂ ಮುಂದುವರೆಯುತ್ತದೆ. ಮಳೆಗಾಲದಲ್ಲಿ ಇಲ್ಲಿ ಹೆಚ್ಚಾಗಿ ಮಳೆ ಬೀಳುವುದಿಲ್ಲ. ಮಳೆಗಾಲದಲ್ಲಿ ಹಿತವಾದ ಹವಾಮಾನ ಇರುವುದರಿಂದ ಪ್ರವಾಸಿಗರು ಮಳೆಗಾಲದಲ್ಲೂ ಇಲ್ಲಿಗೆ ಭೇಟಿ ನೀಡುತ್ತಾರೆ.

ಚಳಿಗಾಲ

(ನವೆಂಬರ್ ನಿಂದ ಫೆಬ್ರವರಿ): ಕಸೌಲಿಯಲ್ಲಿ ನವೆಂಬರ್ ನಿಂದ ಚಳಿಗಾಲ ಆರಂಭವಾಗುತ್ತದೆ. ಚಳಿಗಾಲವು ಫೆಬ್ರವರಿ ತಿಂಗಳ ಅಂತ್ಯದ ವರೆಗೆ ಇರುವುದರಿಂದ ಈ ಸಮಯದಲ್ಲಿ ಸ್ಪಲ್ಪ ಮಟ್ಟಿಗೆ ಹಿಮ ಬೀಳುತ್ತದೆ. ಈ ಕಾಲದಲ್ಲಿ ತಾಪಮಾನ ಕನಿಷ್ಠ 5 ಡಿಗ್ರಿಯಿಂದ ಗರಿಷ್ಠ 14 ಡಿಗ್ರಿಯವರೆಗೆ ಇರುತ್ತದೆ.