ಇದು ನಗರದ ಅತ್ಯಂತ ಪ್ರಮುಖವಾದ ರಸ್ತೆಯಾಗಿದ್ದು ಪ್ರವಾಸಿಗರು ಇಲ್ಲಿಯೇ ಶಾಪಿಂಗ್ ಗೆ ಬರುತ್ತಾರೆ. ಇಲ್ಲಿ ಮೇಲ್ಬಾಗದ ಹಾಗೂ ಕೆಳಭಾಗದ ಮಾಲ್ ರಸ್ತೆಯಲ್ಲಿ ಪ್ರಕೃತಿ ಸೌಂದರ್ಯದ ಮದ್ಯದಲ್ಲಿ ವಿಹರಿಸುವುದೇ ಒಂದು ಖುಷಿ ಕೊಡುವ ವಿಚಾರವಾಗಿದೆ. ಕಸೌಲಿಯ ಹೆಚ್ಚು ಬಿಜಿ ಹಾಗೂ ಜನಭರಿತ ಪ್ರದೇಶ ಇದಾಗಿದೆ, ಏಪ್ರಿಲ್ ನಿಂದ ಜೂನ್ ಹಾಗೂ ಸೆಪ್ಟೆಂಬರ್ ನಿಂದ ಜನವರಿ ನಡುವೆ ಯಾವಾಗ ಬಂದರೂ ಅದು ಉತ್ತಮವಾದ ಸಮಯವೆ ಆಗಿದೆ.
ಕ್ರೈಸ್ಟ್ ಚರ್ಚ್ ನಿಂದ ಮಂಕಿ ಪಾಯಿಂಟ್ ವರೆಗಿನ ಮಾಲ್ ರೋಡಿನಲ್ಲಿ ಅನೇಕ ಅಂಗಡಿಗಳಿದ್ದು ಬಾಯಿ ರುಚಿಗೆ ತಕ್ಕಂತಹ ತಿನಿಸುಗಳು ಇಲ್ಲಿ ದೊರಕುತ್ತದೆ. ಮರ ಹಾಗೂ ಮೆಟಲ್ ಗಳಿಂದ ತಯಾರಿಸಿದ ವಸ್ತುಗಳು, ಧಾರ್ಮಿಕ ಸಾಮಗ್ರಿಗಳು, ಉಣ್ಣೆ ಬಟ್ಟೆಗಳು, ಹಾಗೂ ಟಿಬೇಟಿಯನ್ ಕಾರ್ ಪೆಟ್ಸ್ ಮುಂತಾದ ಅನೇಕ ವಸ್ತುಗಳು ಇಲ್ಲಿ ದೊರೆಯುತ್ತದೆ. ಉಲ್ಲನ್ ಹಾಗೂ ಇತರೆ ನೆನಪಿನ ವಸ್ತುಗಳನ್ನು ಖರೀದಿಸಲು ಹಳೇ ಮಾರುಕಟ್ಟೆ ಹಾಗೂ ಟಿಬೇಟ್ ಮಾರ್ಕೆಟ್ ಗಳಲ್ಲಿ ಪ್ರವಾಸಿಗರು ವ್ಯಾಪಾರ ಮಾಡಬಹುದು. ಮಾಲ್ ರಸ್ತೆಯಲ್ಲಿ ವಾಹನ ಚಲಾಯಿಸಲು ಅನುಮತಿ ಇಲ್ಲದ್ದರಿಂದ ಶುದ್ಧವಾದ ಗಾಳಿ ಇಲ್ಲಿರುತ್ತದೆ.