ಡೋಣ ಬನ್ನಿ ಸುಂದರ ವೆಲ್ಲೊರನ್ನು!
ಹುಡುಕಿ
 
ಹುಡುಕಿ
 

ಕ್ರೈಸ್ಟ್ ಚರ್ಚ್, ಕಸೌಲಿ

ನೋಡಬಹುದಾದ

ಇಲ್ಲಿನ ಹೆಸರಾಂತ ಮಾಲ್ ರಸ್ತೆಯಲ್ಲಿರುವ ಕ್ರೈಸ್ಟ್ ಚರ್ಚ್ ಅತ್ಯಂತ ಹೆಸರುವಾಸಿಯಾದ ಧಾರ್ಮಿಕ ಕೇಂದ್ರವಾಗಿದೆ.1884 ರಲ್ಲಿ ನಿರ್ಮಾಣಗೊಂಡಿರುವ ಈ ಚರ್ಚ್ ಗೋಥಿಕ್ ಶೈಲಿಯಲ್ಲಿ ಕಟ್ಟಲ್ಪಟ್ಟಿದೆ. ಸಂತ ಫ್ರಾನ್ಸಿಸ್ ಹಾಗೂ ಸಂತ ಬಾರ್ನಾಬಾರ ಹೆಸರಿನಲ್ಲಿ ಚರ್ಚ್ ನಿರ್ಮಿಸಲಾಗಿದ್ದು ಈ ಬೆಟ್ಟ ಪ್ರದೇಶದಲ್ಲಿ ಪ್ರವಾಸಿಗರ ಅತ್ಯಂತ ಆಕರ್ಷಣೀಯ ತಾಣವಾಗಿದೆ.

ಕಸೌಲಿ ಚಿತ್ರಗಳು, ಕ್ರೈಸ್ಟ್ ಚರ್ಚ್
Image source:commons.wikimedia

ಈ ವಿಶಾಲವಾದ ಚರ್ಚ್ ಶಿಲುಬೆಯ ಆಕಾರದಲ್ಲಿದ್ದು ಒಂದು ಎತ್ತರವಾದ ಗಡಿಯಾರವನ್ನು ಹೊಂದಿದೆ. ಇದು ಸಮಯ ಮತ್ತು ದಿನವನ್ನೂ ಸಹ ತಿಳಿಸುತ್ತದೆ. ಈ ಪ್ರದೇಶದಲ್ಲಿ 1850 ರಲ್ಲಿ ಭೂಸ್ಥಾಪನೆಗೊಂಡ ಅನೇಕ ಬ್ರಿಟೀಷರ ಸಮಾಧಿಗಳೂ ಇವೆ.

1970 ರ ವರೆಗೂ ಈ ದೇವಾಲಯ ಚರ್ಚ್ ಆಫ್ ಇಂಗ್ಲೇಂಡ್ ಆಡಳಿತದಲ್ಲೇ ಇದ್ದು ನಂತರ ಚರ್ಚ್ ಆಫ್ ನಾರ್ಥ್ ಇಂಡಿಯಾ ಅಥವಾ ಸಿ.ಎನ್.ಐ.ಗೆ ಸೇರಿಸಲ್ಪಟ್ಟಿತು. ಯೋಸೇಫಾ ಹಾಗೂ ಮರಿಯಳು ಯೇಸುವನ್ನು ಹಿಡುದುಕೊಂಡಿರುವ ಸುಂದರವಾದ ಪ್ರತಿಮೆ ಇಲ್ಲಿನ ಅತ್ಯಂತ ಪ್ರಮುಖ ಆಕರ್ಷಣೆಯಾಗಿದೆ.

Please Wait while comments are loading...