ಇಂಡಿಯನ್ ಹಾಗು ಗೋಥಿಕ್ ಶೈಲಿಯ ವಾಸ್ತುಶಿಲ್ಪದ ಮಾದರಿಯಲ್ಲಿ 1923 ರಲ್ಲಿ ಬ್ರಿಟೀಷರು ಈ ಬ್ಯಾಪ್ಟಿಸ್ಟ್ ಚರ್ಚ್ ನಿರ್ಮಿಸಿದರು. ನಿಸರ್ಗದ ಮಧ್ಯದಲ್ಲಿರುವ ಈ ಚರ್ಚ್ ತನ್ನ ಶಿಲ್ಪ ಸೌಂದರ್ಯದಿಂದ ಪ್ರವಾಸಿಗರನ್ನು ಆಕರ್ಷಿಸುತ್ತದೆ. ಇಲ್ಲಿನ ಪ್ರಶಾಂತವಾದ ವಾತಾವರಣ ಪ್ರಪಂಚದ ಮೂಲೆ ಮುಲೆಯಿಂದಲೂ ಪ್ರವಾಸಿಗರನ್ನು ತನ್ನತ್ತ ಆಕರ್ಷಿಸುತ್ತದೆ. ಈ ಚರ್ಚ್ ನಗರದ ಮಧ್ಯಭಾಗದಲ್ಲಿರುವುದರಿಂದ ಟ್ಯಾಕ್ಸಿ ಅಥವಾ ಯಾವುದಾದರೂ ಕಾರಿನ ಮೂಲಕ ಇಲ್ಲಿಗೆ ಸುಲಭವಾಗಿ ತಲುಪಬಹುದು.