ಕಾರವಾರಕ್ಕೆ ಪ್ರವಾಸ ಹೋದಾಗ ಕೂಡಿಬಾಗ ಬೀಚ್, ಬಿನಗಾ ಬೀಚ್ ಮತ್ತು ಮಜಲಿ ಬೀಚ್ ಗಳಿಗೆ ಭೇಟಿ ನೀಡಬಹುದು. ಕೂಡಿಬಾಗ ಬೀಚ್ ವು ಕಾಳಿ ನದಿ ಹಾಗು ಅರೇಬಿಯನ್ ಸಮುದ್ರ ಸಂಧಿಸುವ ಸ್ಥಳದಲ್ಲಿದೆ. ಇಲ್ಲಿ ಬನಾನಾ ಬೋಟ್ ರೈಡ್ ನಂತಹ ಹಲವಾರು ಜಲಕ್ರೀಡೆಗಳ ಉನ್ಮಾದವನ್ನು ಪ್ರವಾಸಿಗರು ಪಡೆಯಬಹುದು.ವಿಶಾಲವಾದ ಕಡಲ ತೀರ ಹಾಗು ನೈಸರ್ಗಿಕ ಸೌಂದರ್ಯಕ್ಕೆ ಹೆಸರುವಾಸಿಯಾದ ಬಿನಗಾ ಬೀಚ್ ವು ಕಾರವಾರಿನಿಂದ 5 ಕಿ.ಮೀ ದೂರದಲ್ಲಿದೆ. ಸಂತ ಆನ್ನೆ ಚರ್ಚ (ಈ ಪ್ರದೇಶದ ಮೊದಲ ಲಾಟಿನ್ ಕ್ಯಾಥೋಲಿಕ್ ಚರ್ಚ), ಅರ್ಗಾ ಬೀಚ್ ಮತ್ತು ದೇವಬಾಗ ಬೀಚ್ ಇದರ ಹತ್ತಿರದಲ್ಲೆ ಇರುವ ಸ್ಥಳಗಳು. ಇನ್ನು ಇಲ್ಲಿಂದ ಮಂಗಳೂರು ಅಥವಾ ಗೋವಾಗೆ ಹೋಗಬಯಸುವಿರಾದರೆ, ಅತಿ ಕಡಿಮೆ ಅವಧಿಯಲ್ಲೆ ಮುಟ್ಟಬಹುದು.ಮಜಲಿ ಬೀಚ್ ಗೆ ಬರುವ ಪ್ರವಾಸಿಗರು ಇಲ್ಲಿನ ರಿಸಾರ್ಟಗಳಲ್ಲಿ ದೊರಕುವ ಉಪಕರಣಗಳನ್ನು ಬಾಡಿಗೆಗೆ ಪಡೆದುಕೊಂಡು ಫಿಷಿಂಗ್, ರೋವಿಂಗ್, ಕಾಯಾಕಿಂಗ್, ಪಕ್ಷಿ ವಿಕ್ಷಣೆ ಮುಂತಾದ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬಹುದು. ಈ ಬೀಚ್ ವು ತನ್ನಲ್ಲಿಯ ಸುಂದರ ಕಾಟೇಜ್ ಹಾಗು ರಿಸಾರ್ಟಗಳಿಗೆ ಹೆಸರುವಾಸಿಯಾಗಿದೆ.