ಈ ದರ್ಗಾವನ್ನು 17 ನೇ ಶತಮಾನದಲ್ಲಿ ನಿರ್ಮಿಸಲಾಗಿದ್ದು, ಭಾರತದ ಕರಾವಳಿ ತೀರದಲ್ಲಿ ಕಾಣಸಿಗುವ ಸುಂದರವಾದ ದೇಗುಲಗಳಲ್ಲಿ ಇದೂ ಒಂದಾಗಿದೆ. ಬಾಗ್ದಾದಿ ಸಂತನೆಂದೆ ಜನಪ್ರಿಯರಾದ ಪೀರ್ ಶಾನ್ ಶಮ್ಸುದ್ದಿನ್ ಖರೋಬತ್ ಅವರಿಗೆ ಈ ದರ್ಗಾವು ಸಮರ್ಪಿತವಾಗಿದ್ದು ಸಾವಿರಾರು ಭಕ್ತಾದಿಗಳು ಇಲ್ಲಿ ಪ್ರಾರ್ಥನೆಯನ್ನು ಸಲ್ಲಿಸುತ್ತಾರೆ. ಸದಾಶಿವಗಡ ಕೋಟೆಯಲ್ಲಿರುವ ದುರ್ಗಾ ದೇವಿ ದೇವಸ್ಥಾನದ ಎದುರಿನಲ್ಲೆ ಇದು ಸ್ಥಿತವಾಗಿದೆ. 1510 ರಲ್ಲಿ ಪೋರ್ಚುಗೀಸರ ಆಳ್ವಿಕೆಯಲ್ಲಿ ಇದನ್ನು ಪೀರ್ ಕೋಟೆಯನ್ನಾಗಿ ಮಾರ್ಪಡಿಸಿದರು ಹಾಗು ಇದಕ್ಕೆ ಫೊರ್ಟೆ ಡಿ ಪಿಟೊ ಅಥವಾ ಪಿರೊ ಎಂದು ತಮ್ಮ ಭಾಷೆಯಲ್ಲಿ ಕರೆಯುತ್ತಿದ್ದರು.