ವನ್ಯಜೀವನದಲ್ಲಿ ಆಸಕ್ತಿಯುಳ್ಳವರು, ಕಾರವಾರದಿಂದ 60 ಕಿ.ಮೀ ದೂರದಲ್ಲಿರುವ ಅಂಶಿ ರಾಷ್ಟ್ರೀಯ ಉದ್ಯಾನವನಕ್ಕೆ ಭೇಟಿ ನೀಡಬಹುದು. ಈ ಉದ್ಯಾನವನವು ಸಮುದ್ರ ಮಟ್ಟದಿಂದ 200 ರಿಂದ 925 ಮೀ. ಎತ್ತರದಲ್ಲಿದ್ದು, 340 ಚ.ಕಿ.ಮೀ ವಿಸ್ತಾರ ಹೊಂದಿದೆ. ದಾಂಡೇಲಿ ವನ್ಯಜೀವಿ ನಿಸರ್ಗಧಾಮವದ ಒಂದು ಭಾಗವನ್ನು ರಾಷ್ಟ್ರೀಯ ಉದ್ಯಾನವನವಾಗಿ ನಿರ್ಮಿಸುವ ಉದ್ದೇಶದಿಂದ ವಿಭಾಜಿಸಲಾಯಿತು. ತದನಂತರ ಇದನ್ನು ಅಂಶಿ ರಾಷ್ಟ್ರೀಯ ಉದ್ಯಾನವನವನ್ನಾಗಿ ರೂಪಿಸಲಾಯಿತು. ಇದು ಪಶ್ಚಿಮ ಘಟ್ಟಗಳ ಜೈವಿಕ ಸೂಕ್ಷ್ಮ ಪ್ರದೇಶದಲ್ಲಿ ಸ್ಥಿತವಾಗಿದೆ. ಜನವರಿ 2007 ರಲ್ಲಿ ಹುಲಿ ಸಂರಕ್ಷಣೆ ಯೋಜನೆಯ ಫಲವಾಗಿ ಇದಕ್ಕೆ ವನ್ಯಧಾಮದ ಮಾನ್ಯತೆಯನ್ನು ನೀಡಲಾಯಿತು. ಇಲ್ಲಿ ವೈವಿಧ್ಯಮಯವಾದ ಪ್ರಾಣಿಸಂಕುಲ ಹಾಗು ಸಸ್ಯರಾಶಿಗಳಿದ್ದು, ನವಂಬರ ಮತ್ತು ಜೂನ ನಡುವಿನ ಅವಧಿಯು ಭೇಟಿ ನೀಡಲು ಸೂಕ್ತವಾಗಿದೆ.