Search
  • Follow NativePlanet
Share
ಮುಖಪುಟ » ಸ್ಥಳಗಳು » ಕರೂರ್ » ಹವಾಮಾನ

ಕರೂರ್ ಹವಾಮಾನ

ಚಳಿಗಾಲ ಹಾಗು ಮಳೆಗಾಲವು ಕರೂರಿಗೆ ಪ್ರವಾಸಕ್ಕೆಂದು ಹೋಗಲು ಹೇಳಿ ಮಾಡಿಸಿದ ಸಮಯವಾಗಿವೆ.

ಬೇಸಿಗೆಗಾಲ

ಮಾರ್ಚ್ ನಿಂದ ಪ್ರಾರಂಭವಾಗುವ ಬೇಸಿಗೆ ಜೂನ್ ವರೆಗೂ ಮುಂದುವರೆಯುತ್ತದೆ. ಈ ಸಂದರ್ಭದಲ್ಲಿ ದಾಖಲಾಗುವ ತಾಪಮಾನ 32°C ರಿಂದ 37°C. ಈ ಅವಧಿಯು ಇಲ್ಲಿಗೆ ಪ್ರವಾಸ ಕೈಗೊಳ್ಳಲು ಯೋಗ್ಯವಾದ ಸಮಯವಲ್ಲ.

ಮಳೆಗಾಲ

ಮಳೆಗಾಲದ ಅವಧಿ: ಜೂನ್ ನಿಂದ ಅಕ್ಟೋಬರ್. ಈ ಸಂದರ್ಭದಲ್ಲಿ ಮಧ್ಯಮ ಪ್ರಮಾಣದ ಮಳೆಯನ್ನು ಕರೂರ್ ಪಡೆಯುತ್ತದೆ. ಇದು ಬೇಸಿಗೆಯಿಂದ ಬೆಂದಿದ್ದ ನಗರ ಹಾಗು ಜನತೆಗೆ ಅತ್ಯುತ್ತಮವಾದ ವಿರಾಮವನ್ನು ಕೊಡುತ್ತದೆ ಎಂದರೆ ತಪ್ಪಾಗಲಾರದು. ತಾಪಮಾನವು ಕೂಡ ಸಹಿಸುವಂತಿರುತ್ತದೆ.

ಚಳಿಗಾಲ

ಚಳಿಗಾಲದ ಅವಧಿ: ಡಿಸೆಂಬರ್ ನಿಂದ ಫೆಬ್ರುವರಿ. ಈ ಸಂದರ್ಭದಲ್ಲಿ ದಾಖಲಾಗುವ ತಾಪಮಾನ 17°C ರಿಂದ 28°C. ಈ ಸಂದರ್ಭದಲ್ಲಿ ನಗರದ ವಾತಾವರಣವು ಹಿತಕರವಾಗಿರುತ್ತದೆ. ಇಲ್ಲಿಗೆ ಪ್ರವಾಸ ಕೈಗೊಳ್ಳಲು ಇದು ಅತ್ತ್ಯುತ್ತಮವಾದ ಸಮಯ.