ಕರೂರ್ ಬಸ್ ನಿಲ್ದಾಣದ ಹತ್ತಿರವಿರುವ ಕರೂರ್ ಸರ್ಕಾರಿ ಸಂಗ್ರಹಾಲಯವನ್ನು 2000 ರಲ್ಲಿ ಸ್ಥಾಪಿಸಲಾಯಿತು. ಈ ಪ್ರದೇಶದ ಪೂರ್ವಜರ ಹಲವಾರು ಸ್ಮರಣಿಕೆಗಳನ್ನು ಇಲ್ಲಿ ಕಾಣಬಹುದು. ಕಂಚು ಹಾಗು ಉಕ್ಕಿನಿಂದ ನಿರ್ಮಿತ ವಸ್ತುಗಳು, ಪುರಾತನ ಸಂಗೀತೋಪಕರಣಗಳು, ನಾಣ್ಯಗಳು, ವಿವಿಧ ರೀತಿಯ ಕಲ್ಲುಗಳು, ಪಳೆಯುಳಿಕೆಗಳು, ಜೀವವೈಜ್ಞಾನಿಕ ನಮೂನೆಗಳು, ಹಲವು ಬಗೆಯ ಸಮುದ್ರ ಜೀವಿಗಳು ಹಾಗು ಚಿಪ್ಪುಗಳನ್ನು ಇಲ್ಲಿ ಪ್ರದರ್ಶಿಸಲಾಗಿದೆ. ಈ ಸಂಗ್ರಹಾಲಯ ಆವಾಗಾವಾಗ ಕಾರ್ಯಾಗಾರಗಳನ್ನೂ, ಭೋದನೆಗಳನ್ನೂ ಹಮ್ಮಿಕೊಳ್ಳುತ್ತಿರುತ್ತದೆ.