Search
  • Follow NativePlanet
Share
ಮುಖಪುಟ » ಸ್ಥಳಗಳು » ಕರ್ನಾಲ್ » ಹವಾಮಾನ

ಕರ್ನಾಲ್ ಹವಾಮಾನ

ಕರ್ನಾಲ್‍ಗೆ ಭೇಟಿ ನೀಡಲು ನವೆಂಬರ್ ನಿಂದ ಫೆಬ್ರವರಿ ನಡುವಿನ ಅವಧಿಯು ಹೇಳಿ ಮಾಡಿಸಿದ ಸಮಯವಾಗಿರುತ್ತದೆ. ಈ ಅವಧಿಯಲ್ಲಿ ಇಲ್ಲಿನ ಹವಾಮಾನವು ಅತ್ಯಂತ ಆಹ್ಲಾದಕರವಾಗಿರುತ್ತದೆ. ಇದರ ಜೊತೆಗೆ ಇಲ್ಲಿನ ಉಷ್ಣಾಂಶವು 12°ಸೆಲ್ಶಿಯಸ್‍ನಿಂದ 20° ಸೆಲ್ಶಿಯಸ್‍ವರೆಗೆ ಇದ್ದು, ನಿಮ್ಮ ಪ್ರವಾಸವನ್ನು ನೆನಪಿನಲ್ಲುಳಿಯುವಂತೆ ಮಾಡುತ್ತದೆ.

ಬೇಸಿಗೆಗಾಲ

ಬೇಸಿಗೆಯು ಇಲ್ಲಿ ಮಾರ್ಚ್ ನಿಂದ ಮೇ ತಿಂಗಳಿನವರೆಗೆ ಇರುತ್ತದೆ. ಒಮ್ಮೊಮ್ಮೆ ಇದು ಜೂನ್ ತಿಂಗಳಿನವರೆಗೆ ವಿಸ್ತರಿಸಿರುತ್ತದೆ. ಈ ಅವಧಿಯಲ್ಲಿ ಇಲ್ಲಿನ ಉಷ್ಣಾಂಶವು 22-40° ಸೆಲ್ಶಿಯಸ್‍ವರೆಗೆ ಇರುತ್ತದೆ. ಇದರ ಜೊತೆಗೆ ಇಲ್ಲಿ ಬೇಸಿಗೆಯಲ್ಲಿ ಒಣ ಹವೆ ಮತ್ತು ಬಿಸಿ ಗಾಳಿಯ ಮಾರುತಗಳು ಬೀಸುತ್ತಿರುತ್ತವೆ.

ಮಳೆಗಾಲ

ಮಳೆಗಾಲವು ಇಲ್ಲಿ ಜುಲೈನಿಂದ ಸೆಪ್ಟೆಂಬರ್ ತಿಂಗಳಿನವರೆಗೆ ವಿಸ್ತರಿಸಿರುತ್ತದೆ. ಬಿಟ್ಟು ಬಿಟ್ಟು ಸುರಿಯುವ ಅನಿಯಮಿತವಾದ ಮಳೆಯನ್ನು ಕರ್ನಾಲ್‍ನಲ್ಲಿ ಕಾಣಬಹುದು. ಇಲ್ಲಿ ಮಳೆಗಾಲದಲ್ಲಿ ಯಾವಾಗಲು ಮೋಡ ಕವಿದ ಆಕಾಶ ಮತ್ತು ಆರ್ದ್ರತೆಯಿರುವ ವಾತಾವರಣವನ್ನು ನಾವು ಕಾಣಬಹುದು.

ಚಳಿಗಾಲ

ಚಳಿಗಾಲವು ಇಲ್ಲಿ ನವೆಂಬರ್ ನಿಂದ ಫೆಬ್ರವರಿಯವರೆಗೆ ಇರುತ್ತದೆ. ಈ ಅವಧಿಯಲ್ಲಿ ಇಲ್ಲಿನ ಹವಾಮಾನವು ಅತ್ಯಂತ ಆಹ್ಲಾದಕರವಾಗಿರುತ್ತದೆ. ಇದರ ಜೊತೆಗೆ ಇಲ್ಲಿನ ಉಷ್ಣಾಂಶವು 12°ಸೆಲ್ಶಿಯಸ್‍ನಿಂದ 20° ಸೆಲ್ಶಿಯಸ್‍ವರೆಗೆ ಇರುತ್ತದೆ.