ಪೇಟ್ ಕೋಟೆ, ಕೋಟ್ಲಿಗಡ್ ಎಂದೂ ಕರೆಯಲ್ಪಡುವ ಕರ್ಜಾತ್ ನಗರದ ಪ್ರಸಿದ್ಧ ಪ್ರವಾಸಿ ತಾಣ ಈ ಸಣ್ಣ ಹಳ್ಳಿ. ಪೇಟ್ ಬೆಟ್ಟದಿಂದ ಸುತ್ತಲಿನ ಪ್ರದೇಶದ ಸಂಪೂರ್ಣ ದೃಶ್ಯವನ್ನೂ ವೀಕ್ಷಿಸಬಹುದಾಗಿದ್ದು ಮಾಥೆರಾನ್ ಕೂಡ ಹಿನ್ನೆಲೆಯಲ್ಲಿ ಕಂಡುಬರುತ್ತದೆ. ಅಲ್ಲದೇ ಕೊಂಕಣ ಗ್ರಾಮಾಂತರ ವಲಯದ ಸಂಪೂರ್ಣ ವ್ಯಾಪ್ತಿಯೂ ಸಹ ಇಲ್ಲಿಂದ ಸುಂದರವಾಗಿ ಗೋಚರಿಸುತ್ತದೆ. ಈ ಕೋಟೆಗೆ ಹತ್ತಿರದಲ್ಲಿ ಪವಿತ್ರ ಭಗವಾನ್ ಭೈರೋಬ ಇರುವ ಸಣ್ಣ ಗುಹಾ ದೇವಾಲಯವಿದೆ. ಪೇಟ್ ಕೋಟೆ ಈಗ ಅವಶೇಷವಾಗಿಯಷ್ಟೇ ಉಳಿದುಕೊಂಡಿದೆ. ಆದಾಗ್ಯೂ, ಇಲ್ಲಿನ ನೀರಿನ ತೊಟ್ಟಿ /ಟ್ಯಾಂಕ್ ಸದಾ ತುಂಬಿರುತ್ತದೆ. ಐತಿಹಾಸಿಕ ಹೇಳಿಕೆಯ ಪ್ರಕಾರ ಈ ಕೋಟೆಯು ಮರಾಠ ಆಡಳಿತಗಾರರು ತಮ್ಮ ಸಾಮ್ರಾಜ್ಯವನ್ನು ಶತ್ರುಗಳಿಂದ ರಕ್ಷಿಸಿಕೊಳ್ಳುವುದಕ್ಕಾಗಿ ನಿರ್ಮಿಸಿದ್ದರು ಎಂದು ಹೇಳಲಾಗುತ್ತದೆ.
ಕರ್ಜಾತ್ ಪ್ರದೇಶದ ಆಸುಪಾಸಿನಲ್ಲಿರುವ ನೆದರ್ ಸೊಲ್ ಆಣೆಕಟ್ಟು ಹಾಗೂ ಪಾನ್ಸದ್ ವನ್ಯ ಮೃಗಾಲಯ ಪ್ರಮುಖ ಪ್ರವಾಸಿ ಆಕರ್ಷಣೆಗಳಾಗಿವೆ.