ಜನ್ಸಕರ್ ತೆಹ್ಸಿಲ್ನ ಒಂದು ಪಟ್ಟಣ ಜಂಗಲಾ. ಪದಂ ಪಟ್ಟಣದಿಂದ ಇದು 35 ಕಿ.ಮೀ. ದೂರದಲ್ಲಿದೆ. ಪದಂನಿಂದ ಜಂಗಲಾ ಮಾರ್ಗವಾಗಿ ಹರಿಯುವ ಜನ್ಸಕರ್ ನದಿ ಚಳಿಗಾಲದಲ್ಲಿ ಹೆಪ್ಪುಗಟ್ಟುತ್ತದೆ. ಇದು ಎಷ್ಟು ಗಟ್ಟಿಯಾಗಿರುತ್ತದೆಂದರೆ ಇದರ ಮೇಲೆ ಜನ ಓಡಾಡಿದರೂ ಒಡೆಯುವುದಿಲ್ಲ. ಸ್ಥಳೀಯವಾಗಿ ಈ ಹೆಪ್ಪುಗಟ್ಟಿದ ಮೇಲ್ಪದರವನ್ನು ಚಾದರ ಎಂದು ಕರೆಯಲಾಗುತ್ತದೆ. ಈ ಹೆಪ್ಪುಗಟ್ಟಿದ ನದಿಯ ಸಮೀಪವೆ ಒಂದು ಗುಹೆ ಇದೆ. ಪ್ರವಾಸಿಗರು ಇಲ್ಲಿ ಬಂದಾಗ ಅಲ್ಲಿಯೇ ಕ್ಯಾಂಪ್ ಹೂಡಬಹುದು. ಬೇಸಿಗೆ ಟ್ರೆಕ್ಕಿಂಗ್ ಕ್ಯಾಂಪ್ಗಳಿಗೆ ಜಂಗಲಾ ಮೂಲ ಸ್ಥಾನವಾಗಿ ಜನಪ್ರಿಯವಾಗಿದೆ.