ಶರಗೊಲೆ ಆಶ್ರಮ ಅಥವಾ ಗೊಂಪಾವು ಚಿಕ್ಕದಾಗಿದ್ದರೂ ಅತ್ಯಂತ ಜನಪ್ರಿಯವಾಗಿದೆ. ಗೆಲುಪ್-ಪಾ ಅಥವಾ ಹಳದಿ ಟೋಪಿ ವಲಯದ ಬೌದ್ಧ ಆಶ್ರಮವಾಗಿದೆ. ಕಾರ್ಗಿಲ್ ಜಿಲ್ಲೆಯ ಶರಂಗೊಲೆ ಎಂಬ ಹಳ್ಳಿಯಲ್ಲಿ ಇದಿದೆ. ಇಲ್ಲಿ ಅವಲೋಕೀತೇಶ್ವರರ ವಿಗ್ರಹ ಇದೆ. ಬುದ್ಧೋತ್ಸವ ಅಥವಾ ಬುದ್ಧನ ಹಲವು ರೂಪಗಳ ಮಿಶ್ರಣವಾಗಿರುವ ರೂಪ ಇಲ್ಲಿದೆ. ಇಲ್ಲಿ ಹಿಂದು ದೇವತೆ ತಾರಾದೇವಿಯ ಮೂರು ಚಿತ್ರಗಳಿವೆ. ಟಿಬೇಟ್ನ ಕಲಾವಿದರೊಬ್ಬರು ಮರದಲ್ಲಿ ದೇವಿಯ ಮೂರ್ತಿ ಕೆತ್ತಿದ್ದಾರೆ. ಅದೂ ಇಲ್ಲಿದೆ. ಈ ಆಶ್ರಮದ ಅಟ್ಟಣಿಗೆ ಮೇಲೆ ನಿಂತು ನೋಡಿದಾಗ ಕಾಂತಿಲೆವೆರ್ ಆಶ್ರಮ ಕಾಣಸಿಗುತ್ತದೆ.