Search
  • Follow NativePlanet
Share
ಮುಖಪುಟ » ಸ್ಥಳಗಳು » ಕಾರ್ಗಿಲ್ » ಆಕರ್ಷಣೆಗಳು » ಸನಿ ಆಶ್ರಮ

ಸನಿ ಆಶ್ರಮ, ಕಾರ್ಗಿಲ್

1

ಸನಿ ಆಶ್ರಮವು 'ಟುರ್‌ಟೋಟ್‌ ಗ್ಯಾಟ್‌' ಅಂತಲೂ ಗುರುತಾಗಿದೆ. ಸನಿ ಹಳ್ಳಿಯಲ್ಲಿ ಈ ಆಶ್ರಮ ಇದೆ. ವಿಶ್ವದಲ್ಲಿಯೇ ಅತ್ಯಂತ ಪ್ರಸಿದ್ಧ ಬೌದ್ಧ ತಾಣಗಳಲ್ಲಿ ಇದು ಒಂದಾಗಿದೆ. ಈ ಗೊಂಪಾ ಅಥವಾ ಆಶ್ರಮವು ವಿಶ್ವದ 8 ಪ್ರಸಿದ್ಧ ಬೌದ್ಧ ಆಶ್ರಮಗಳಲ್ಲಿ ಒಂದಾಗಿ ಜನಪ್ರಿಯವಾಗಿದೆ. ಪ್ರಸಿದ್ಧ ಬೌದ್ಧ ಧರ್ಮಗುರುಗಳಾಗಿದ್ದ ನರೋಪಾ, ಪದ್ಮಸಂಭವ ಹಾಗೂ ಮರೋಪಾ ಈ ಆಶ್ರಮಕ್ಕೆ ಭೇಟಿ ನೀಡಿದ್ದರು. ಕುಶಾನರ ಅರಸು ಕನಿಷ್ಕ ಒಂದನೇ ಶತಮಾನದಲ್ಲಿ ಈ ಆಶ್ರಮವನ್ನು ನಿರ್ಮಿಸಿದ ಎನ್ನಲಾಗಿದೆ. ಟಿಬೇಟಿಯನ್‌ ಬೌದ್ಧ ಧರ್ಮ ಬೋಧಿಸುವ ದ್ರುಕಪಾ ಕರಂಗ್ಯು ಶಾಲೆಯನ್ನು ಈ ಆಶ್ರಮ ಒಳಗೊಂಡಿದೆ. ಲಡಾಖ್‌ ಹಾಗೂ ಜನ್ಸಕರ್‌ ಪ್ರದೇಶದ ಅತ್ಯಂತ ಪುರಾತನ ದೇವಾಲಯಗಳಲ್ಲಿ ಇದು ಒಂದೆನಿಸಿದೆ.

ಈ ಆಶ್ರಮವು 108 ಸ್ತೂಪ ಅಥವಾ ಚೋರ್ಟೇನ್ಸ್‌ಗಳನ್ನು ಒಳಗೊಂಡಿದೆ. ಬುದ್ಧ ಮಂದಿರವು ಡೋಮ್‌ ಮಾದರಿಯ ವಿನ್ಯಾಸ ಹೊಂದಿದೆ. ಕನಿಷ್ಕ ದೊರೆ ಇದನ್ನು ಕೂಡ ಒಂದನೇ ಶತಮಾನದಲ್ಲಿಯೇ ನಿರ್ಮಿಸಿದ್ದ. ಈ ಸ್ತೂಪಗಳಲ್ಲಿ ಕನ್ನಿಕಾ ಚೋರ್ಟೇನ್‌ ಅತ್ಯಂತ ಜನಪ್ರಿಯವಾಗಿದೆ. ಇದು 20 ಅಡಿ ಎತ್ತರವಾಗಿದ್ದು, ಆಶ್ರಮದ ಹಿಂಭಾಗದಲ್ಲಿ ಸ್ಥಾಪಿತವಾಗಿದೆ. ಆಶ್ರಮದ ಆವರಣವು ಆಯತಾಕಾರದಲ್ಲಿ ಇದೆ. ದುಕ್ಕಡ್‌ ಅಥವಾ ಸಮ್ಮೇಳನ ಸಭಾಂಗಣ ಒಳಗೊಂಡಿದೆ. ಇಲ್ಲಿ ಚಂಬಾ, ಚೆನುರೇನ್‌ ಹಾಗೂ ಪದ್ಮಸಂಭವ ಅವರ ಚಿತ್ರಗಳಿವೆ. ಒಂದು ಚಿಕ್ಕ ಕೋಣೆ ಇದ್ದು ಇಲ್ಲಿರುವ ಶೆಲ್ಪ್‌ ಮೇಲೆ ಕಂಗ್ಯಾರ ಧರ್ಮ ಗ್ರಂಥದ ಸಂಪುಟಗಳು ಇಡಲ್ಪಟ್ಟಿವೆ. ಟಿಬೇಟಿಯನ್‌ ಬೌದ್ಧ ಧರ್ಮೀಯರು ಧಾರ್ಮಿಕ ಗ್ರಂಥಗಳ ಪಟ್ಟಿ ಮಾಡಿಕೊಂಡು ನಾನಾ ಟಿಬೇಟಿಯನ್‌ ಬೌದ್ಧ ಧರ್ಮ ಬೋಧನಾ ಶಾಲೆಗಳಿಗೆ ಸಲ್ಲಿಸುತ್ತಾರೆ. ಇದು ದೇವಾಲಯದ ಒಳಗೇ ಇದೆ. ಅಲ್ಲದೇ ಆಶ್ರಮದಲ್ಲಿ ಒಂದು ನರೋಪಾ ಮಂದಿರ ಕೂಡ ಇದೆ.

ಪ್ರತಿ ವರ್ಷ ಜುಲೈ ಹಾಗೂ ಆಗಸ್ಟ್‌ನಲ್ಲಿ ಆಶ್ರಮದ ಆವರಣದಲ್ಲಿ ಮಾಸ್ಕ್‌(ಮುಖವಾಡ) ನೃತ್ಯವನ್ನು ಆಯೋಜಿಸಲಾಗುತ್ತದೆ. ಸನಿ ನರೋ ನಸ್ಜಾಲ ಹಾಗೂ ಗ್ರೇಟ್‌ ಪ್ರೇಯರ್‌ಗಳು ಇಲ್ಲಿನ ಇತರೆ ಜನಪ್ರಿಯ ಉತ್ಸವಗಳಾಗಿವೆ.

One Way
Return
From (Departure City)
To (Destination City)
Depart On
23 Apr,Tue
Return On
24 Apr,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
23 Apr,Tue
Check Out
24 Apr,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
23 Apr,Tue
Return On
24 Apr,Wed