Search
  • Follow NativePlanet
Share
ಮುಖಪುಟ » ಸ್ಥಳಗಳು » ಕರೌಲಿ » ಆಕರ್ಷಣೆಗಳು » ಮದನ್ ಮೋಹನ್ ಜಿ ದೇವಸ್ಥಾನ

ಮದನ್ ಮೋಹನ್ ಜಿ ದೇವಸ್ಥಾನ, ಕರೌಲಿ

1

 

ಕರೌಲಿಯ, ಕರೌಲಿ ಕೋಟೆಯಲ್ಲಿರುವ ಮದನ್ ಮೋಹನ್ ಜಿ ದೇವಸ್ಥಾನವನ್ನು ಮಹಾರಾಜಾ ಗೋಪಾಲ್ ಸಿಂಗ್ ರು ನಿರ್ಮಿಸಿದ್ದಾರೆ. ಈ ದೇವಸ್ಥಾನವು, ಭಗವಾನ್ ಕೃಷ್ಣನ ಅವತಾರವಾದ ಮದನ್ ಮೋಹನನಿಗೆ ಸಮರ್ಪಿತವಾಗಿದೆ.3 ಅಡಿ ಉದ್ದದ ಭಗವಾನ್ ಕೃಷ್ಣ ಮತ್ತು 2 ಅಡಿ ಉದ್ದದ ರಾಧೆಯ ವಿಗ್ರಹಗಳನ್ನು ಈ ದೇವಸ್ಥಾನದಲ್ಲಿ ಕಾಣಬಹುದು. ಮಹಾರಾಜಾ ಗೋಪಾಲ್ ಸಿಂಗ್ ನು ದೌಲತಾಬಾದ್ ಗೆದ್ದ ನಂತರ, ಭಗವಾನ್ ಕೃಷ್ಣನು ತನ್ನನ್ನು ಪೂಜಿಸಬೇಕೆಂಬ ಇಚ್ಛೆಯನ್ನು ರಾಜನ ಕನಸಿನಲ್ಲಿ ವ್ಯಕ್ತಪಡಿಸಿದ್ದರಿಂದ, ಅಜ್ಮೇರ್ ನಿಂದ ಈ ಕೃಷ್ಣನ  ವಿಗ್ರಹವನ್ನು ಕರೌಲಿಯ ದೇವಸ್ಥಾನಕ್ಕೆ ತರಲಾಯಿತೆಂದು ಇಲ್ಲಿನ ಜನರ ಅನಿಸಿಕೆಯಾಗಿದೆ. ಕರೌಲಿ ಕಲ್ಲಿನಿಂದ ನಿರ್ಮಿಸಲಾದ ಈ ದೇವಸ್ಥಾನದಲ್ಲಿ ಮಧ್ಯಯುಗದ ವಾಸ್ತುಕಲೆಯನ್ನು ಕಾಣಬಹುದು. ಗರ್ಭಗೃಹವು ತನ್ನ ಸುತ್ತಲು ವಿವಿಧ ಚಿತ್ರಗಳಿಂದ ಅಲಂಕೃತಗೊಂಡಿದೆ. ವಾಸ್ತುಶಿಲ್ಪದ ಸುಂದರತೆಯನ್ನು ಗರ್ಭಗುಡಿ ಮಾತ್ರವಲ್ಲದೆ ಹೊರಾಂಗಣ ಮತ್ತು ಜಗ್ಮೋಹನ್ ನಲ್ಲಿಯು ಚಿತ್ರಿಸಲಾಗಿದೆ.ಕೃಷ್ಣ, ರಾಧೆಯರಿಗೆ ಸಂಬಂಧಪಟ್ಟ ಹಲವಾರು ಉತ್ಸವಗಳನ್ನು ಈ ದೇವಸ್ಥಾನದಲ್ಲಿ ಆಚರಿಸಲಾಗುತ್ತದೆ. ಪ್ರವಾಸಿಗರು ಇಲ್ಲಿ ಆಚರಿಸಲಾಗುವ ಜನ್ಮಾಷ್ಟಮಿ, ರಾಧಾ ಅಷ್ಟಮಿ, ಗೋಪಾಷ್ಟಮಿ ಮತ್ತು ಹಿಂದೋಲಾ ಉತ್ಸವಗಳಲ್ಲಿ ಪಾಲ್ಗೊಳ್ಳಬಹುದಾಗಿದೆ. ಇವುಗಳಲ್ಲದೆ, ಪ್ರತಿ ಅವಮಾಸ್ಯೆಗಳಲ್ಲಿ ಸ್ಥಳೀಯರು ಮತ್ತು ಪ್ರವಾಸಿಗರಿಗೆಂದು ವಿಶೇಷವಾದ ಹಬ್ಬವನ್ನೂ ಕೂಡ ಆಚರಿಸಲಾಗುತ್ತದೆ.

 

One Way
Return
From (Departure City)
To (Destination City)
Depart On
20 Apr,Sat
Return On
21 Apr,Sun
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
20 Apr,Sat
Check Out
21 Apr,Sun
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
20 Apr,Sat
Return On
21 Apr,Sun